ಅಪ್ಪನಿಗೆ ಕಾಲ್​ಶೀಟ್ ಕೊಡ್ತಾರಾ 'ಕ್ರೇಜಿಸ್ಟಾರ್' ಪುತ್ರ? 'ಮುಗಿಲ್​​ಪೇಟೆ' ಬಗ್ಗೆ ನಟ ಮನುರವಿಚಂದ್ರನ್ ಹೇಳಿದ್ದೇನು?

1194205
Published on

ಬೆಂಗಳೂರು: ಮಳೆ, ಮಂಜು, ಪ್ರೇಮ ತುಂಬಿರುವ ಸಿನಿಮಾ 'ಮುಗಿಲ್​​ಪೇಟೆ'. ಕಳೆದವಾರ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ನಟನೆಯ 'ಗರುಡ ಗಮನ ವೃಷಭ ವಾಹನ', ರಮೇಶ್ ಅವರ '100' ಸಿನಿಮಾ ಸೇರಿದಂತೆ ಹಲವು ಸಿನಿಮಾಗಳು ಬಿಡುಗಡೆಯಾದವು. ಆದರೆ, ಅವುಗಳ ಪೈಕಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ಸಿನಿಮಾ 'ಮುಗಿಲ್​​ಪೇಟೆ' ಸಹ ಪ್ರೇಕ್ಷಕರ ಗಮನ ತುಂಬಾನೆ ಸೆಳೆದಿದೆ.

ಚಿತ್ರತಂಡಕ್ಕೆ ತಮ್ಮ ಸಿನಿಮಾ ಮೇಲಿರುವ ಪ್ರೀತಿ ಎಷ್ಟು ಅಂದರೆ ಅವರ ಟೈಟಲ್ ನಲ್ಲಿರುವ 'ಮುಗಿಲಿನಷ್ಟು' ಎಂದು ಒಂದೊಂದು ಫ್ರೇಮ್ ನಲ್ಲಿ ಕಾಣಿಸಿಕೊಂಡಿದೆ. ಭರತ್ ನಾವುಂದ ನಿರ್ದೇಶಿಸಿದ ಸಿನಿಮಾದಲ್ಲಿ ಒಂದೊಳ್ಳೆ ಪ್ರೇಮದ ಕಥೆಯನ್ನು ಹೊಸ ರೀತಿಯಲ್ಲಿ ತೋರಿಸಿದ್ದು, ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವೆರೆಗೆ ಒಟ್ಟಿಗೆ ಕೂತು ನೋಡಬಹುದು. ಸಿನಿಮಾ ರಿಲೀಸ್ ಆಗಿ 6 ದಿನಗಳು ಕಳೆದರೂ ಈಗಲೂ ಎಲ್ಲರ ಮನೆ ಮಾತಾಗಿದೆ.

ಅಂದಹಾಗೆ, ಸಿನಿಮಾದಲ್ಲಿ ನಟ ಮನುರವಿಚಂದ್ರನ್ ನಟನೆಯನ್ನು ಅವರ ತಂದೆಯ ಜೊತೆ ಹಲವು ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರ ನೋಡಿ ತುಂಬಾ ಖುಷಿ ಆದ ಕ್ರೇಜಿ ಸ್ಟಾರ್ ನಟ ರವಿಚಂದ್ರನ್, 'ನನ್ನ ಮಗನಿಗೆ ನಾನು ನಿರ್ದೇಶನ ಮಾಡಬೇಕಂದರೆ ಅವನ ಕಾಲ್​​ಶಿಟ್ ಪಡೆದು ಕೊಳ್ಳಬೇಕು' ಎಂದು ಹೆಮ್ಮೆಯಾಗಿ ಹೇಳಿಕೊಂಡಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರು ಮನುರಂಜನ್ ತಂದೆ ರವಿ ಅವರನ್ನ ತುಂಬಾನೆ ಹೋಲುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ನಟ ಮನುರಂಜನ್​ರ ಮೂರನೇ ಸಿನಿಮಾ 'ಮುಗಿಲ್​​ಪೇಟೆ'ಯನ್ನು ಜನ ಹೇಗೆ ಸ್ವೀಕರಿಸುತ್ತಿದ್ದಾರೆಂದು ಸ್ವತಃ ಅವರೇ ವಿಜಯವಾಣಿಯ ಜೊತೆ ಮಾತಾಡಿ ತಿಳಿಸಿದ್ದಾರೆ. ಯಂಗ್ ಕ್ರೇಜಿ ಸ್ಟಾರ್ ಮನುರಂಜನ್ ಮಾತುಗಳನ್ನು ಕೇಳಲು ಈ ವಿಶೇಷ ಸಂದರ್ಶನವನ್ನು ತಪ್ಪದೆ ನೋಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net