ರವಿ ಕಟಪಾಡಿಗೆ ಸಾಧಕ ರತ್ನ ಪ್ರಶಸ್ತಿ ಪ್ರದಾನ

kota (2)
Published on

ಕೋಟ: ಬೇಳೂರು ಗ್ರಾಮದ ಗುಳ್ಳಾಡಿಯಲ್ಲಿ 14ನೇ ವರ್ಷದ ಸಾರ್ವಜನಿಕ ಶಾರದೋತ್ಸವ ಸಾಂಸ್ಕೃತಿಕ ವೇದಿಕೆಯಲ್ಲಿ ಸಮಾಜ ಸೇವಕ ರವಿ ಕಟಪಾಡಿಗೆ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯ ಕರಕುಶಲ ನಿಗಮ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಬೇಳೂರು ಉದ್ಘಾಟಿಸಿದರು. ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಸಾಧಕ, ಪ್ರಸಂಗಕರ್ತ ಪಿ.ವಿ.ಆನಂದ ಸಾಲಿಗ್ರಾಮ ಅವರನ್ನು ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಾದ ಶ್ರೇಯಸ್ ಗುಳ್ಳಾಡಿ, ತೃಪ್ತಿ ಆರ್.ದೇವಾಡಿಗ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬೇಳೂರು ಗ್ರಾಪಂ ಅಧ್ಯಕ್ಷ ಜಯಶೀಲ ಶೆಟ್ಟಿ, ಪ್ರಧಾನ ಅರ್ಚಕ ಶ್ರೀಧರ ಅಡಿಗ, ಉದ್ಯಮಿಗಳಾದ ಸೀತಾರಾಮ, ಮಹೇಶ್ ಶೆಟ್ಟಿ, ಗಿಳಿಯಾರು ಯುವಕ ಮಂಡಲ ಸ್ಥಾಪಕಾಧ್ಯಕ್ಷ ಸುರೇಶ ಗಿಳಿಯಾರು, ಸಮಿತಿ ಗೌರವಾಧ್ಯಕ್ಷ ಭಾಸ್ಕರ್, ಅಧ್ಯಕ್ಷ ಜಿ.ರಾಮ ಉಪಸ್ಥಿತರಿದ್ದರು. ಉಪನ್ಯಾಸಕ ನಾಗರಾಜ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net