ರಥಬೀದಿ ಫ್ರೆಂಡ್ಸ್ ಪೋಸ್ಟರ್ ಬಿಡುಗಡೆ

va
Published on

ಕೋಟ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಜತೆಯಲ್ಲೇ ವಡ್ಡರ್ಸೆ ರಥಬೀದಿ ಫ್ರೆಂಡ್ಸ್ ಸಂಘದ ದಶಮಾನೋತ್ಸವ ಮಾರ್ಚ್ 18ರಂದು ನಡೆಯಲಿದ್ದು, ಆಯ್ದ ತಂಡಗಳ ಸಂಗೀತ ಮಹಾಯುದ್ದ ಬಾನ್ದನಿ - 2025 ನಡೆಯಲಿದೆ. ಕಾರ್ಯಕ್ರಮದ ಪೋಸ್ಟರ್‌ನ್ನು ದೇವರ ಸನ್ನಿಧಿಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.

ಸಂಘ ಗೌರವಾಧ್ಯಕ್ಷ ರಾಘವೇಂದ್ರ ಭಟ್ಟ ಬನ್ನಾಡಿ, ಅಧ್ಯಕ್ಷ ರಾಜು ಪೂಜಾರಿ ಉಪ್ಲಾಡಿ, ಕಾರ್ಯದರ್ಶಿ ವಡ್ಡರ್ಸೆ ಸಚ್ಚಿದಾನಂದ ಅಡಿಗ, ಪ್ರಧಾನ ಸಂಯೋಜಕ ನರೇಂದ್ರ ಕುಮಾರ ಕೋಟ, ಸತೀಶ್ ವಡ್ಡರ್ಸೆ ಹಾಗೂ ಕೊತ್ತಾಡಿ ವಿಜಯ ಕುಮಾರ ಶೆಟ್ಟಿ, ಕಲಾರಂಗ ಅಧ್ಯಕ್ಷ ಸಚಿನ್ ಶೆಟ್ಟಿ ಯಾಳಕ್ಲು, ಪದ್ಮನಾಭ ಆಚಾರ್ಯ ಬನ್ನಾಡಿ ಹಾಗೂ ರಥಬೀದಿ ಫ್ರೆಂಡ್ಸ್‌ನ ಸದಸ್ಯರಾದ ನಾಗೇಂದ್ರ ಅಡಿಗ ವಡ್ಡರ್ಸೆ ಹಾಗೂ ವಾಸು ಬನ್ನಾಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net