ನಾಳೆ ಆತ್ರಾಡಿಯಲ್ಲಿ ಯುವ ಸಂಭ್ರಮ

Published on

ಕುಂದಾಪುರ: ವಂಡ್ಸೆ ಗ್ರಾಮದ ಆತ್ರಾಡಿ ಮಾತೃಭೂಮಿ ಯುವ ಸಂಘಟನೆ 8ನೇ ವರ್ಷದ ವಾರ್ಷಿಕೋತ್ಸವ ಯುವ ಸಂಭ್ರಮ-2025 ಆತ್ರಾಡಿ ಕಂಬಳಗದ್ದೆ ವಠಾರದಲ್ಲಿ ಫೆ.22ರಂದು ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ಶಾಸಕ ಗುರುರಾಜ್ ಗಂಟಿಹೊಳೆ ಉದ್ಘಾಟಿಸಲಿದ್ದಾರೆ. ಮಾತೃಭೂಮಿ ಯುವ ಸಂಘಟನೆ ಅಧ್ಯಕ್ಷ ಶಶಿಧರ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಸಾಧಕರನ್ನು ಅಭಿನಂದಿಸುವರು. ಎಂ.ಎಸ್ ಮಂಜ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ಮಂಜರು ಪ್ರತಿಭಾ ಪುರಸ್ಕಾರ ನೆರವೇರಿಸುವರು. ವಂಡ್ಸೆ ಗ್ರಾಪಂ ಅಧ್ಯಕ್ಷೆ ಗೀತಾ ಅವಿನಾಶ್ ಬಹುಮಾನ ವಿತರಿಸಲಿದ್ದಾರೆ. ಬಳಿಕ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ವೀರ ಬರ್ಬರಿಕ ಪ್ರದರ್ಶನಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net