ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಇಳಿಕೆ; ಅದಕ್ಕೆ ಕಾರಣ ಮೋದಿ ಸರ್ಕಾರದ ಇದೊಂದು ಕ್ರಮ..

PM Modi
Published on

ನವದೆಹಲಿ: ದೇಶದಲ್ಲಿ ಕೆಲವು ವರ್ಷಗಳಿಂದ ಅತ್ಯಾಚಾರ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಆಗಿದ್ದು, ಅದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರದ ಒಂದು ಪ್ರಮುಖ ಕ್ರಮವೇ ಕಾರಣ ಎನ್ನಲಾಗಿದೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಇಂದು ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಂಥದ್ದೊಂದು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಮೋದಿ ನೇತೃತ್ವದ ಸರ್ಕಾರ 8 ವರ್ಷಗಳನ್ನು ಪೂರೈಸಿದ್ದು, ಈ ಅವಧಿಯಲ್ಲಿ ಕೈಗೊಂಡ ಕ್ರಮ, ಸಾಧನೆಗಳ ಕುರಿತು ಮಾತನಾಡುತ್ತ ಅವರು ಈ ವಿಷಯ ತಿಳಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಾಲಕಿಯರ ಶಾಲೆಗಳಲ್ಲಿ ಭೇಟಿ ನೀಡಿದಾಗ, ಅಲ್ಲಿ ಶಾಲೆಯನ್ನು ತ್ಯಜಿಸಿದ ವಿದ್ಯಾರ್ಥಿನಿಯರ ಸಂಖ್ಯೆ ವಿದ್ಯಾರ್ಥಿಗಳಿಗಿಂತಲೂ ಹೆಚ್ಚಿರುವುದನ್ನು ಗಮನಿಸಿದ್ದರು. ಇದಕ್ಕೆ ಪ್ರಮುಖ ಕಾರಣ ಏನು ಎಂಬುದನ್ನು ಅವಲೋಕಿಸಿದಾಗ ಶಾಲೆಗಳಲ್ಲಿ ಟಾಯ್ಲೆಟ್​ಗಳು ಇಲ್ಲದಿರುವುದೇ ಕಾರಣ ಎಂಬುದು ತಿಳಿದು ಬಂದಿತ್ತು ಎಂದು ಸಂಬಿತ್ ಪಾತ್ರ ಹೇಳಿದರು.

ಪ್ರಧಾನಮಂತ್ರಿ ಅವರು ಕೆಂಪುಕೋಟೆಯಲ್ಲಿ ಶೌಚಗೃಹಗಳ ಬಗ್ಗೆ ಮಾತನಾಡುತ್ತಾರೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. ಇನ್ನು ಜಗತ್ತಿನಲ್ಲಿಯೇ ಶೌಚಗೃಹಗಳ ಕುರಿತು ಮಾತನಾಡಿದ ಪ್ರಪ್ರಥಮ ಪ್ರಧಾನಿ ಎಂದರೆ ಮೋದಿ. ಪ್ರಧಾನಿಯವರು ಶೌಚಗೃಹಗಳಿಗೆ ಒತ್ತುನೀಡಿದ್ದರಿಂದಲೇ ಅವರ ಆಡಳಿತದ ಅವಧಿಯಲ್ಲಿ ದೇಶದ ಹಲವು ರಾಜ್ಯಗಳಲ್ಲಿನ ಅತ್ಯಾಚಾರ ಪ್ರಕರಣಗಳ ಸಂಖ್ಯೆ ತಗ್ಗಿದೆ ಎಂದು ಸಂಬಿತ್ ಪಾತ್ರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net