More

    ಫೋರ್ಬ್ಸ್ ಭಾರತ ಲಿಸ್ಟ್​ನಲ್ಲಿ ರಶ್ಮಿಕಾ..! ಕ್ರೇಜ್ ಹುಟ್ಟುಹಾಕಿದ ‘ಕಿರಿಕ್​’ ನಟಿ..

    ಮುಂಬೈ: ಸೃಜನಶೀಲತೆ ಮತ್ತು ಪ್ರತಿಭೆಯಿಂದ ಸಮಾಜದಲ್ಲಿ ಬದಲಾವಣೆ ತರುವ ಕೆಲಸ ಮಾಡುವ 30 ವರ್ಷದೊಳಗಿನವರನ್ನು ಖ್ಯಾತ ನಿಯತಕಾಲಿಕೆ ಫೋರ್ಬ್ಸ್ ಗುರುತಿಸಿದ್ದು, ಇತ್ತೀಚೆಗೆ ಬಿಡುಗಡೆಯಾದ ಈ ‘ಅಸಾಧಾರಣ ಜನರ’ ಪಟ್ಟಿಯಲ್ಲಿ ವಿವಿಧ ಕ್ಷೇತ್ರಗಳ 30 ಯುವ ಪ್ರತಿಭೆಗಳು ಸ್ಥಾನ ಪಡೆದಿದ್ದಾರೆ. ಅವರಲ್ಲಿ ಬೆಳ್ಳಿತೆರೆಯ ಮೋಹನಾಂಗಿ ರಶ್ಮಿಕಾ ಮತ್ತು ಇನ್ನೂ ಕೆಲವರು ಇದ್ದಾರೆ.

    ಪ್ರಸ್ತುತ ಟಾಲಿವುಡ್​ನಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ದೇಶದ ಸ್ಟಾರ್ ಹೀರೀಯಿನ್​ಗಳನ್ನೆಲ್ಲ ಹಿಂದಿಕ್ಕಿ ಫೋರ್ಬ್ಸ್ ನ ಭಾರತದ 30ರೊಳಗಿನ 30 ಮಹಿಳೆಯರಲ್ಲಿ ಸ್ಥಾನ ಪಡೆಯುವ ಮೂಲಕ ಎಲ್ಲೆಲ್ಲೂ ಕ್ರೇಜ್ ಹುಟ್ಟುಹಾಕಿದ್ದಾರೆ.

    ಇದನ್ನೂ ಓದಿ: ಗುಡ್ ನ್ಯೂಸ್ ಹೇಳಿದ ಚಿರಂಜೀವಿ ಪುತ್ರಿ ಶ್ರೀಜಾ.. ಹೊಸ ಪಯಣಕ್ಕೆ ನಾಂದಿ!

    2016ರಲ್ಲಿ ಕನ್ನಡದ ಕಿರಿಕ್​ ಪಾರ್ಟಿ ಮೂಲಕ ಚಿತ್ರರಂಗ ಪ್ರವೇಶಿಸಿದ ಕೊಡಗಿನ ಕುವರಿ ರಶ್ಮಿಕಾ, ಚಲೋ ಚಿತ್ರದ ಮೂಲಕ ತೆಲುಗಿಗೆ ಹೋಗಿ ಸರಣಿ ಹಿಟ್ ಸಿನಿಮಾಗಳ ಮೂಲಕ ಪಡ್ಡೆ ಹೈಕಳ ಹೃದಯ ಕದ್ದಿದ್ದಾರೆ. ಸದ್ಯ ರಶ್ಮಿಕಾ ತೆಲುಗಿನಲ್ಲಿ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾ ಫೇಮಸ್ ಮ್ಯಾಗಜಿನ್ ಫೋರ್ಬ್ಸ್ ನ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    ರಶ್ಮಿಕಾ ಇತ್ತೀಚೆಗೆ ಹಿಂದಿಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಅನಿಮಲ್ ನಲ್ಲಿ ನಟಿಸಿದ್ದಾರೆ. ರಣಬೀರ್ ಕಪೂರ್ ಅಭಿನಯದ ಈ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ. ಭಾರೀ ನಿರೀಕ್ಷೆಗಳ ನಡುವೆ ಬಂದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು.

    ಇತ್ತೀಚೆಗಷ್ಟೇ ಫೋರ್ಬ್ಸ್ ಇಂಡಿಯಾ 30 ಅಂಡರ್ 30 ಪಟ್ಟಿಯಲ್ಲಿ ರಶ್ಮಿಕಾ ಸ್ಥಾನ ಪಡೆದಿದ್ದಾರೆ ಎಂದು ಫೋರ್ಬ್ಸ್ ಇಂಡಿಯಾ ಪ್ರಕಟಿಸಿದೆ. ಇದರಿಂದ ಅವರ ಅಭಿಮಾನಿಗಳಿಗೆ ಖುಷಿಯಾಗಿದೆ.

    ಈಗಾಗಲೇ ಅನಿಮಲ್, ಮಿಷನ್ ಮಜ್ನು, ಗುಡ್ ಬ ಮುಂತಾದ ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾಗೆ ಇವುಗಳ ಜೊತೆಗೆ ಮತ್ತೊಂದು ಅದ್ಧೂರಿ ಚಿತ್ರದಲ್ಲಿ ಅವಕಾಶ ಸಿಕ್ಕಿದೆಯಂತೆ. ಛಾವಾ ಎಂಬ ಐತಿಹಾಸಿಕ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಅವರು ನಟಿಸಿದ್ದಾರೆ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್‌ಗೆ ನಾಯಕಿಯಾಗಿ ರಶ್ಮಿಕಾ ನಟಿಸಲಿದ್ದಾರೆ.

    ಈ ಚಿತ್ರವು ಛತ್ರಪತಿ ಶಿವಾಜಿಯ ಹಿರಿಯ ಮಗ ಛತ್ರಪತಿ ಶಂಭಾಜಿ ಮಹಾರಾಜರ ಜೀವನವನ್ನು ಆಧರಿಸಿದೆ. ಶಂಭಾಜಿ ಮಹಾರಾಜರ ಪತ್ನಿ ಯೇಸುಬಾಯಿ ಭೋಸಲೆ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ಚವಾ ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸಲಿದ್ದಾರೆ. ದಿನೇಶ್ ವಿಷನ್ ನಿರ್ಮಿಸಲಿದ್ದಾರೆ.

    ಸದ್ದುಮಾಡುತ್ತಿದೆ ‘ಗಾಡ್ಜಿಲ್ಲಾ x ಕಾಂಗ್ – ದಿ ನ್ಯೂ ಎಂಪೈರ್’: ಟ್ರೈಲರ್ ನೋಡಿದ್ರೆ ಮೈಂಡ್ ಬ್ಲ್ಯಾಕ್ ಗ್ಯಾರಂಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts