More

    ಗುಡ್ ನ್ಯೂಸ್ ಹೇಳಿದ ಚಿರಂಜೀವಿ ಪುತ್ರಿ ಶ್ರೀಜಾ.. ಹೊಸ ಪಯಣಕ್ಕೆ ನಾಂದಿ!

    ಹೈದರಾಬಾದ್​: ಮೆಗಾಸ್ಟಾರ್ ಚಿರಂಜೀವಿ ಅವರ ಕಿರಿಯ ಮಗಳು ಶ್ರೀಜಾ ಕೊನಿದೇಲಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಸದ್ಯ ಪತಿಯಿಂದ ಬೇರ್ಪಟ್ಟು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.

    ಇದನ್ನೂ ಓದಿ: ಸದ್ದುಮಾಡುತ್ತಿದೆ ‘ಗಾಡ್ಜಿಲ್ಲಾ x ಕಾಂಗ್ – ದಿ ನ್ಯೂ ಎಂಪೈರ್’: ಟ್ರೈಲರ್ ನೋಡಿದ್ರೆ ಮೈಂಡ್ ಬ್ಲ್ಯಾಕ್ ಗ್ಯಾರಂಟಿ!

    ಯಾವಾಗಲೂ ತನ್ನ ಮತ್ತು ಕುಟುಂಬದ ಬಗ್ಗೆ ವಿಷಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಶ್ರೀಜಾ, ಇತ್ತೀಚೆಗೆ ತನ್ನ ಇನ್​ಸ್ಟಾಗ್ರಾಮ್​ ಪುಟದಲ್ಲಿ ಮಾಡಿರುವ ಪೋಸ್ಟ್ ಇದೀಗ ವೈರಲ್ ಆಗಿದೆ.

    ಶ್ರೀಜಾ ಈ ಹಿಂದೆ ತನ್ನ ಮದುವೆಯ ಬಗ್ಗೆ ಸಂಚಲನ ಮೂಡಿಸಿದ್ದು ಗೊತ್ತೇ ಇದೆ. ಪ್ರೀತಿಸಿ ಮದುವೆಯಾದ ಶ್ರೀಜಾ, ನಂತರ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದರು. ಇವರಿಗೆ ಒಂದು ಮಗು ಸಹ ಇತ್ತು. ಬಳಿಕ ಅವರು ವಿಜೇತಾ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ಕಲ್ಯಾಣ್ ದೇವ್ ಜತೆ ಏಳು ಹೆಜ್ಜೆ ಹಾಕಿದರು. ಅವರಿಗೆ ಸಹ ಒಂದು ಮಗು ಹುಟ್ಟಿದ್ದು, ಕಲ್ಯಾಣ್ ದೇವ್ ಸಹ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
    ಇನ್ನು ಶ್ರೀಜಾಗೆ ಎರಡನೇ ಮದುವೆಯಾದ ಬಳಿಕ ಸುಖಸಂಸಾರ ಅವರದ್ದಾಗುತ್ತದೆ ಎಂದುಕೊಂಡರೆ ಅದೂ ಆಗಲಿಲ್ಲ. ಅವರು ಸಹ ಬೇರೆಯಾಗಿತುವ ಕುರಿತು ಈಗ ಸುದ್ದಿಯಾಗುತ್ತಿದೆ.
    ಶ್ರೀಜಾ ತನ್ನ ತಂದೆ ಮೆಗಾಸ್ಟಾರ್ ಚಿರಂಜೀವಿಯೊಂದಿಗೆ ವಾಸಿಸುತ್ತಿದ್ದರೆ, ಕಲ್ಯಾಣ್ ದೇವ್ ಆತನ ಹೆತ್ತವರೊಂದಿಗೆ ವಾಸಿಸುತ್ತಿದ್ದಾರೆ. ವಿಚ್ಛೇದನ ಪಡೆಯದಿದ್ದರೂ ಪ್ರತ್ಯೇಕವಾಗಿಯೇ ವಾಸವಾಗಿದ್ದಾರೆ.
    ಇನ್ನು ಅವರ ಪುತ್ರಿ ತಂದೆಯೊಂದಿಗೆ ಕೆಲವು ದಿನಗಳು ಮತ್ತು ತಾಯಿಯೊಂದಿಗೆ ಕೆಲವು ದಿನಗಳು ಇರುತ್ತಿದ್ದಾಳೆ.

    ಕಲ್ಯಾಣ್ ದೇವ್ ಅವರ ಸಾಮಾಜಿಕ ಮಾಧ್ಯಮವನ್ನು ಗಮನಿಸಿದರೆ, ತನ್ನ ಮಗಳು ತನ್ನೊಂದಿಗೆ ಸಮಯ ಕಳೆಯುತ್ತಿರುವುದಾಗಿ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಮಗಳು ಮತ್ತು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇನ್ನು ಇವರಿಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿದೆ. ಇದಲ್ಲದೇ ಶ್ರೀಜಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಆಕೆ ತನಗೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಳ್ಳುತ್ತಾಳೆ.

    2023ರಲ್ಲಿ ಹೊಸ ಪ್ರಯಾಣ ಆರಂಭಿಸುವುದಾಗಿ ಶ್ರೀಜಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ತನ್ನ ಶಕ್ತಿ ಸಿಕ್ಕಿದೆ… ಹೊಸ ಪಯಣ ಶುರುವಾಗಿದೆ ಎಂದು ಪೋಸ್ಟ್ ಹಾಕಿದ್ದಾಳೆ.

    ಇತ್ತೀಚೆಗಷ್ಟೇ ಶ್ರೀಜಾ ಕೊನಿಡೆಲಾ ಅವರು ನೆಟಿಜನ್‌ಗಳೊಂದಿಗೆ ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಸುಂದರವಾದ ಶೀರ್ಷಿಕೆಯನ್ನೂ ಕೊಟ್ಟಿದ್ದಾರೆ. ನೀವು ನಿಮ್ಮ ಅತ್ಯುತ್ತಮ ಚಿಯರ್ ಲೀಡರ್ ಎಂದು ಬರೆಯಲಾಗಿದೆ. ಬೆವರಿನಲ್ಲಿ ತೊಯ್ದು ಹೋಗಿರುವ ಶ್ರೀಜಾ ಅವರ ಈ ಫೋಟೋ ನೋಡಿದರೆ ಅವರು ಜಿಮ್‌ನಲ್ಲಿ ಇದ್ದಾರೆ ಎಂಬುದು ಅರ್ಥವಾಗುತ್ತದೆ.

    ಇನ್ನು ಎರಡು ಹೆಜ್ಜೆ ಮುಂದೆ, ಒಂದು ಹೆಜ್ಜೆ ಹಿಂದಕ್ಕೆ..ಎಂದು ಅವರು ಬರೆದುಕೊಂಡಿದ್ದು, ಇದೂ ಮುನ್ನುಗ್ಗುವ ಪಯಣ ಎಂದು ಬರೆಯಲಾಗಿದೆ. ಕೆಲಸದಲ್ಲಿ ಸೂಕ್ಷ್ಮ ಪ್ರಗತಿ ಸಾಧಿಸಿದ್ದರೂ, ಸಾಮಾಜಿಕ ಜಾಲತಾಣಗಳಲ್ಲೂ ಸಂಭ್ರಮಿಸಬೇಕು ಎಂದು ಶ್ರೀಜಾ ಹೇಳಿದ್ದಾರೆ. ಶ್ರೀಜಾ ಅವರ ಪೋಸ್ಟ್ ನೋಡಿದರೆ… ಅವರು ಫಿಟ್ನೆಸ್ ಫ್ರೀಕ್ ಆಗಿ ಜಿಮ್‌ನಲ್ಲಿ ಶ್ರಮಿಸುತ್ತಿದ್ದಾರೆ ಎಂದು ತೋರುತ್ತದೆ. ಇದರೊಂದಿಗೆ ಅವರ ಹೊಸ ಪಯಣ ಆರಂಭವಾಗಲಿದೆಯಂತೆ.

    ಬೆಳ್ಳುಳ್ಳಿ ಕಬಾಬ್​ ಪೇಮಸ್​ ಆದ್ಮೇಲೆ ದೊಡ್ಮೆನೆಯಿಂದ ಎಲ್ಲರೂ ಕಾಲ್​ ಮಾಡಿದ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts