Rashmika Mandanna: ಸದ್ಯ ಬಾಲಿವುಡ್ ಮತ್ತು ಟಾಲಿವುಡ್ನಲ್ಲಿ ಭಾರೀ ಸದ್ದು ಮಾಡುತ್ತಿರುವ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ, ತಮ್ಮ ಮುಂದಿನ ಸಿನಿಮಾ ಅಥವಾ ಮದುವೆ ವಿಚಾರಗಳಿಗಿಂತ ಕೊಟ್ಟ ಒಂದೇ ಒಂದು ಹೇಳಿಕೆಯಿಂದ ಈಗ ಮತ್ತೊಮ್ಮೆ ನೆಟ್ಟಿಗರ ಟೀಕೆ, ವ್ಯಾಪಕ ಟ್ರೋಲ್ಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: Daughter Wedding: ನಿಮ್ಮ ಮನೆ ಮಗಳ ಮದ್ವೆಯಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಉಡುಗೊರೆಯಾಗಿ ನೀಡಬೇಡಿ!
ಎಡವಟ್ಟು
‘ಅನಿಮಲ್’ ಮತ್ತು ‘ಪುಷ್ಪ 2’ ಚಿತ್ರಗಳಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಇದೀಗ ಮತ್ತೊಮ್ಮೆ ತಮ್ಮ ಹೇಳಿಕೆಯಿಂದ ಟ್ರೋಲ್ಗಳಿಗೆ ಆಹಾರವಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ರಶ್ಮಿಕಾ, ಇತ್ತೀಚೆಗೆ ಚಿತ್ರಕ್ಕೆ ನಡೆದ ಸಂದರ್ಶನವೊಂದರಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಿನಿಮಾ ಮತ್ತು ತಮಿಳಿನ ಸ್ಟಾರ್ ದಳಪತಿ ವಿಜಯ್ ನಟಿಸಿದ ಚಿತ್ರಗಳ ಹೆಸರೇಳುವಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.
ಮೊದಲ ನಟ ಅವರೇ
“ಗಿಲ್ಲಿ ಚಿತ್ರದಲ್ಲಿ ನಾನು ದಳಪತಿ ವಿಜಯ್ ಸರ್ ಅವರನ್ನು ತುಂಬಾ ಇಷ್ಟ ಪಡ್ತೀನಿ. ಇದನ್ನು ನಾನು ಆಗಾಗ್ಗೆ ಹೇಳುತ್ತಲೇ ಇರ್ತಿನಿ. ಏಕೆಂದರೆ, ನಾನು ಥಿಯೇಟರ್‌ನಲ್ಲಿ ನೋಡಿದ ಮೊದಲ ನಟ ಅವರೇ. ನನಗೆ ಇತ್ತೀಚೆಗೆ ಗೊತ್ತಾದ ವಿಷಯ ‘ಗಿಲ್ಲಿ’ ಚಿತ್ರ ‘ಪೋಕಿರಿ’ಯ ರೀಮೇಕ್ ಅನ್ನೋದು. ಅಸಲಿಗೆ ಈ ವಿಷಯ ತಿಳಿದಿರಲಿಲ್ಲ. ನನ್ನ ಜೀವನದ ಬಹುತೇಕ ದಿನಗಳಲ್ಲಿ ‘ಅಪ್ಪಾಡಿ ಪೋಡು’ ಹಾಡಿಗೆ ಕುಣಿದು ಕುಪ್ಪಳಿಸಿದ್ದೀನಿ” ಎಂದು ಸಂದರ್ಶನದಲ್ಲಿ ರಶ್ಮಿಕಾ ಹೇಳಿದರು.
#Ghilli is a remake of #Pokkiri enti raashu😂😂#RashmikaMandannapic.twitter.com/pAUKXaApGN
— Filmy Bowl (@FilmyBowl) December 20, 2024
ಅಸಲಿಗೆ ತಪ್ಪೇನು?
ವಾಸ್ತವವಾಗಿ ‘ಗಿಲ್ಲಿ’ ಮಹೇಶ್ ಬಾಬು ಮತ್ತು ಗುಣಶೇಖರ್ ಅವರ ಬ್ಲಾಕ್ ಬಸ್ಟರ್ ‘ಒಕ್ಕಡು’ ಚಿತ್ರದ ರಿಮೇಕ್ ಆಗಿದೆ. ‘ಒಕ್ಕಡು’ ಮತ್ತು ‘ಪೋಕಿರಿ’ ನಡುವೆ ರಶ್ಮಿಕಾ ಮಂದಣ್ಣ ಗೊಂದಲಕ್ಕೀಡಾಗಿದ್ದಾರೆ. ಇದರ ಬಗ್ಗೆ ನಟಿಗೆ ಸ್ಪಷ್ಟ ಮಾಹಿತಿ ಇರಲಿಲ್ಲ ಎಂಬುದು ಇಲ್ಲಿ ಗೊತ್ತಾಗಿದೆ. ಪ್ರಿನ್ಸ್ ಹೀರೋ ಅಭಿನಯದ ಒಕ್ಕಡು ಅಂದಿನ ಕಾಲಕ್ಕೆ ತೆಲುಗಿನಲ್ಲಿ ಕಮರ್ಷಿಯಲ್ ಸೂಪರ್ ಹಿಟ್ ಆಗಿ ಹೊರಹೊಮ್ಮಿದ ಚಿತ್ರ. ಈ ಸಂಗತಿಯನ್ನು ಅರಿಯದ ರಶ್ಮಿಕಾ, ತಪ್ಪಾಗಿ ಹೇಳಿಕೆ ನೀಡಿದ್ದೇ ಈಗ ಸುರಿಮಳೆಯ ಟ್ರೋಲ್ಗೆ ದೊಡ್ಡ ಕಾರಣವಾಗಿದೆ.
In this world, who doesn’t make mistakes? We all say things we shouldn’t, and admitting and apologizing for those mistakes is what makes someone a civilized person. #RashmikaMandanna clarified and apologized for her mistake like a civilized person. Still, some people aren’t… pic.twitter.com/NA8T7K0LN3
— Rashmika Delhi Fans (@Rashmikadelhifc) December 21, 2024
ರಶ್ಮಿಕಾ ಕ್ಷಮೆಯಾಚನೆ
ಜಾಲತಾಣಗಳಲ್ಲಿ ತನ್ನ ಹೇಳಿಕೆಗೆ ಟೀಕಿಸಿ, ಟ್ರೋಲ್ ಮಾಡಿದವರ ಬಳಿ ಕ್ಷಮೆಯಾಚಿಸಿದ ರಶ್ಮಿಕಾ, “ನಾನು ತಪ್ಪು ಮಾಡಿದ್ದೇನೆ ಎಂದು ತಿಳಿದ ತಕ್ಷಣವೇ ನನ್ನನ್ನು ಸೋಷಿಯಲ್ ಮೀಡಿಯಾ ಬಿಡುವುದಿಲ್ಲ ಎಂಬ ವಿಷಯವೂ ನನಗೆ ಅರಿವಾಯಿತು. ಇದು ಮೊದಲೇ ತಿಳಿದಿತ್ತು. ಕ್ಷಮಿಸಿ, ದಯವಿಟ್ಟು ಕ್ಷಮಿಸಿ. ನನ್ನ ತಪ್ಪು. ಮಹೇಶ್ ಬಾಬು ಅವರ ಎಲ್ಲಾ ಸಿನಿಮಾಗಳನ್ನು ನಾನು ಇಷ್ಟ ಪಡ್ತೀನಿ” ಎಂದು ಕ್ಷಮೆ ಕೋರಿದ್ದಾರೆ. ಇಷ್ಟಾದರೂ ಟ್ರೋಲ್ಗಳ ಹಾವಳಿ ಮಾತ್ರ ಕಡಿಮೆಯಾಗಿಲ್ಲ ಎಂಬುದು ಸದ್ಯ ರಶ್ಮಿಕಾ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ,(ಏಜೆನ್ಸೀಸ್).
ಓಪನಿಂಗ್ನಲ್ಲೇ ಸಖತ್ ಟ್ವಿಸ್ಟ್! ಕಡೆಗೂ ‘ಫೋಕಸ್’ ಕಳೆದುಕೊಂಡ ಪ್ರೇಕ್ಷಕರು | UI Release