

ತೆಲುಗಿನ ‘ಅರ್ಜುನ್ ರೆಡ್ಡಿ’ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಆ್ಯಕ್ಷನ್-ಕಟ್ ಹೇಳುತ್ತಿರುವ ಮೊದಲ ಬಾಲಿವುಡ್ ಸಿನಿಮಾ ‘ಅನಿಮಲ್’. ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಚೊಚ್ಚಲ ಬಾರಿಗೆ ಜತೆಯಾಗಿದ್ದು, ಈಗಾಗಲೇ ಟೀಸರ್ ಮೂಲಕವೇ ಸಿನಿಮಾ ಕುತೂಹಲ ಮೂಡಿಸಿದೆ. ಈಗಾಗಲೇ ರಣಬೀರ್ ಕಪೂರ್ ಮತ್ತು ಅನಿಲ್ ಕಪೂರ್ ಲುಕ್‌ಗಳು ರಿವೀಲ್ ಆಗಿದ್ದು, ಇತ್ತೀಚೆಗಷ್ಟೆ ಚಿತ್ರತಂಡ ರಶ್ಮಿಕಾ ಮಂದಣ್ಣ ಪಾತ್ರವನ್ನು ಪರಿಚಯಿಸಿದೆ.
‘ಅನಿಮಲ್’ನಲ್ಲಿ ರಶ್ಮಿಕಾ ‘ಗೀತಾಂಜಲಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೀರೆ, ಹಣೆಗೆ ಕುಂಕುಮ, ತುಟಿಯಂಚಲ್ಲಿ ನಗು ಚೆಲ್ಲಿರುವ ರಶ್ಮಿಕಾ ಹೋಮ್ಲಿ ಲುಕ್, ಅವರ ಅಭಿಮಾನಿಗಳಲ್ಲಿ ಖುಷಿ ಮೂಡಿಸಿದೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ರಣಬೀರ್, ರಶ್ಮಿಕಾ, ಅನಿಲ್ ಕಪೂರ್ ಜತೆ ಬಾಬಿ ಡಿಯೋಲ್, ತೃಪ್ತಿ ದಿಮ್ರಿ, ಶಕ್ತಿ ಕಪೂರ್, ಸುರೇಶ್ ಓಬೆರಾಯ್ ಪ್ರಮುಖ ತಾರಾಗಣದಲ್ಲಿದ್ದಾರೆ. ಹಿಂದಿ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ‘ಅನಿಮಲ್’ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದ್ದು, ಇದೇ ತಿಂಗಳ 28ರಂದು ಟೀಸರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.
ಎಲ್ಲವೂ ಅಂದುಕೊಂಡಂತಾಗಿದ್ದರೆ ಚಿತ್ರ ಆ. 11ರಂದು ತೆರೆಗೆ ಬರಬೇಕಿತ್ತು. ಆದರೆ, ವಿಎ್ಎಕ್ಸ್ ಕೆಲಸಗಳಿಗೆ ಹೆಚ್ಚು ಸಮಯ ಬೇಕಾದ ಕಾರಣ ಇದೀಗ ‘ಅನಿಮಲ್’ ಬಿಡುಗಡೆ ದಿನಾಂಕ ಡಿ. 1ಕ್ಕೆ ಮುಂದೂಡಲ್ಪಟ್ಟಿದೆ.
-ಏಜೆನ್ಸೀಸ್