ಆದರೆ, ಸಿನಿಮಾಗಳಿಗೆ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ ರಶ್ಮಿಕಾ, ಜಾಹೀರಾತುಗಳಿಗೆ ಮಾತ್ರ ತುಂಬಾ ಕಡಿಮೆ ಸಂಭಾವನೆ ಪಡೆಯುತ್ತಿದ್ದಾರಂತೆ. ಮತ್ತೊಂದೆಡೆ, ಪೂಜಾ ಚಿತ್ರಗಳಿಗೆ ರಶ್ಮಿಕಾಗಿಂತ ಕಡಿಮೆ ಸಂಭಾವನೆ ಪಡೆದರೂ, ಜಾಹೀರಾತುಗಳಿಗೆ ಹೆಚ್ಚು ಸಂಭಾವನೆ ಪಡೆಯುತ್ತಾರಂತೆ. ಹಾಗಾಗಿ, ರಶ್ಮಿಕಾಗೆ ಇದು ಪ್ಲಸ್ ಪಾಯಿಂಟಾಗಿ ಜಾಹೀರಾತಿಗೆ ಕೂಡ ದೊಡ್ಡ ದೊಡ್ಡ ಬ್ರ್ಯಾಂಡ್ಗಳು ರಶ್ಮಿಕಾರನೇ ಆಯ್ಕೆ ಮಾಡಿಕೊಳ್ಳುತ್ತಿರುವುದು ಹೆಚ್ಚಾಗಿದೆ. ಹಾಗಾಗಿ, ಪೂಜಾ ಹೆಗ್ಡೆಯನ್ನು ಬಿಟ್ಟು ರಶ್ಮಿಕಾ ಅವರನ್ನು ಬ್ರ್ಯಾಂಡ್ಗಳು ಆಯ್ಕೆ ಮಾಡಿಕೊಳ್ಳುತ್ತಿರುವುದು ನಟಿಯರಿಬ್ಬರ ನಡುವಿನ ಕೋಲ್ಡ್ವಾರ್ ಅನ್ನು ಹೆಚ್ಚಿಸಿದೆ. ಇದಲ್ಲದೇ, ರಶ್ಮಿಕಾ, ಪೂಜಾ ಅವರ ಈ ಹವಾ ಕೆಲವೇ ಕೆಲವು ದಿನಗಳು ಮಾತ್ರ ಎಂಬ ಮಾತುಗಳು ಕೇಳಿಬರುತ್ತಿವೆ.