ಅತ್ಯಾಚಾರಿಗಳಿಗೆ ದುಬೈ ಮಾದರಿ ಶಿಕ್ಷೆಯಾಗಲಿ: ಸಚಿವ ಆನಂದ್ ಸಿಂಗ್

anandsingh
Published on

ಬೆಂಗಳೂರು: ಖಾತೆ ಬಗ್ಗೆ ಅಸಮಾಧಾನ ತೋರಿಸುತ್ತಲೇ ತಡವಾಗಿ ಅಧಿಕಾರ ವಹಿಸಿಕೊಂಡಿರುವ ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆನಂದ್​ ಸಿಂಗ್​​ ಅವರು, ಮೈಸೂರಿನ ಗ್ಯಾಂಗ್ ರೇಪ್‌ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ತಪ್ಪಿತಸ್ಥರಿಗೆ ದುಬೈ ಮಾದರಿ ಉಗ್ರ ಶಿಕ್ಷೆಯಾಗಬೇಕು ಎಂದಿದ್ದಾರೆ.

ಚಾಮುಂಡಿ ಬೆಟ್ಟದಂತಹ ಪ್ರಸಿದ್ಧ ಪ್ರವಾಸೀ ತಾಣದಲ್ಲಿ ಅತ್ಯಾಚಾರ ನಡೆದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ, ಪ್ರವಾಸೋದ್ಯಮ ತಾಣಗಳಲ್ಲಿ ಸೇಫ್ಟಿ ಇಲ್ಲ. ಮೂಲಭೂತ ಸೌಕರ್ಯ ನೀಡಲು ಹೋದ್ರೆ ಅದನ್ನು ಖಾಸಗೀಕರಣ ಮಾಡ್ತಿದೀರಿ ಅಂತ ವಿರೋಧ ಮಾಡ್ತಾರೆ ಎಂದರು, ಸಿಂಗ್​. ಜೊತೆಗೆ, ಬೇರೆಯವರ ಇಲಾಖೆ ಬಗ್ಗೆ ಪ್ರತಿಕ್ರಿಯೆ ನೀಡೋದಿಲ್ಲ. ತಪ್ಪಿತಸ್ಥರಿಗೆ ದುಬೈ ಮಾದರಿಯಲ್ಲಿಯೇ ಇಲ್ಲಿಯೂ ಅದು ಕಟ್ ಇದು ಕಟ್ ಆಗ್ಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net