More

    ಸೈಬರ್​ ಕೆಫೆಯಲ್ಲಿ ಸಿಗುತ್ತಿತ್ತು, ಕರೊನಾ ನೆಗೆಟೀವ್ ವರದಿ!

    ಮುಂಬೈ: ಕೆಲವು ರಾಜ್ಯಗಳಲ್ಲಿ ವಿಮಾನ ಅಥವಾ ಟ್ರೈನ್​ ಪ್ರಯಾಣಕ್ಕೆ ಕರೊನಾ ಪರೀಕ್ಷೆಗೊಳಪಟ್ಟು, ನೆಗೆಟೀವ್​ ವರದಿಯನ್ನು ತೋರಿಸಬೇಕೆಂಬ ನಿಯಮವಿದೆ. ಇದನ್ನೇ ದುರ್ಬಳಕೆ ಮಾಡಿಕೊಂಡು, ಹಣಕ್ಕಾಗಿ ಜನರಿಗೆ ನಕಲಿ ಕರೊನಾ ನೆಗೆಟೀವ್​ ರಿಪೋರ್ಟ್​​ ನೀಡುತ್ತಿದ್ದ ಸೈಬರ್​ ಕೆಫೆ ಆಪರೇಟರ್​ಅನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ದಕ್ಷಿಣ ಮುಂಬೈನ ಭೇಂಡಿ ಬಜಾರ್​ ಪ್ರದೇಶದಲ್ಲಿನ ಸೈಬರ್​ ಕೆಫೆಯೊಂದರಲ್ಲಿ ಸುಳ್ಳು ಕರೊನಾ ನೆಗೆಟೀವ್​​ ವರದಿಗಳನ್ನು ನೀಡುತ್ತಿರುವ ಬಗ್ಗೆ ಸುಳಿವು ಬಂದಿತ್ತು. ಈ ಹಿನ್ನೆಲೆಯಲ್ಲಿ ಅಪರಾಧ ವಿಭಾಗದ ಪೊಲೀಸರು ಬುಧವಾರ ಸಂಜೆ, ಸಿಬ್ಬಂದಿಯೋರ್ವನನ್ನು ಗ್ರಾಹಕನ ಸೋಗಿನಲ್ಲಿ ಅಲ್ಲಿಗೆ ಕಳುಹಿಸಿದರು. ಕೆಫೆಯಾತ 700 ರೂಪಾಯಿ ಪಡೆದು ಲ್ಯಾಬೊರೇಟರಿ ಹೆಸರಿನಲ್ಲಿ ಆರ್​ಟಿಪಿಸಿಆರ್​ ಟೆಸ್ಟ್​​ನ ನೆಗೆಟೀವ್ ವರದಿ ನೀಡಿದ ಎನ್ನಲಾಗಿದೆ.

    ಇದನ್ನೂ ಓದಿ: 44,658 ಹೊಸ ಕರೊನಾ ಪ್ರಕರಣ ದಾಖಲು

    ನಂತರ ಸ್ಥಳದ ಮೇಲೆ ರೇಡ್​ ಮಾಡಿದ ಪೊಲೀಸರು ಕೆಲವು ನಕಲಿ ಸರ್ಟಿಫಿಕೇಟುಗಳನ್ನೂ, ಲ್ಯಾಬೊರೇಟರಿಯ ಲೆಟರ್​ಹೆಡ್​ಗಳನ್ನೂ, ಕಂಪ್ಯೂಟರ್​ ಮತ್ತಿತರ ಉಪಕರಣಗಳನ್ನು ಜಪ್ತಿಪಡಿಸಿಕೊಂಡಿದ್ದಾರೆ.

    ಚಾಮುಂಡಿ ತಪ್ಪಲಲ್ಲಿ ರೇಪ್​ ಪ್ರಕರಣ​: ಮೈಸೂರು ಪೊಲೀಸರ ಮೇಲೆ ಸಿಎಂ ಗರಂ

    ಚಿರತೆಗಳೊಂದಿಗೆ ಫೋಟೋಶೂಟ್​… ಆಸ್ಪತ್ರೆ ಸೇರಿದ ಮಾಡೆಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts