12 ವರ್ಷದ ಬಾಲೆಯ ಮೇಲೆ ಅತ್ಯಾಚಾರ, ಹಲ್ಲೆ, ಕಳವು ಮಾಡುವಾಗ ನೋಡಿದ್ದಕ್ಕೆ ರೇಪ್​ ಮಾಡಿದ ಎಂದ ಬಂಧಿತ

Arrest
Published on

ನವದೆಹಲಿ: ದೆಹಲಿಯ ಪಶ್ಚಿಮ ವಿಹಾರ್​ ಪ್ರದೇಶದಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದ 33 ವರ್ಷದ ಕಾರ್ಮಿಕನನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಮೊಂಗೊಲ್​ಪುರಿ ಬಡಾವಣೆ ನಿವಾಸಿ ಹಾಗೂ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುವ 33 ವರ್ಷದ ಅಪರಾಧ ಹಿನ್ನೆಲಯುಳ್ಳ ವ್ಯಕ್ತಿಯನ್ನು ಬಂಧಿಸಲಾಗಿದೆ. 2006ರಲ್ಲಿ ಈತ ಒಂದು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಈತನ ವಿರುದ್ಧ ಅನೇಕ ಕಳ್ಳತನದ ಪ್ರಕರಣಗಳು ದಾಖಲಾಗಿರುವುದಾಗಿ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳ್ಳತನ ಮಾಡಿದ್ದನ್ನು ನೋಡಿದ್ದಕ್ಕೆ ಅತ್ಯಾಚಾರ: ಈ ವ್ಯಕ್ತಿಯು ಆ.2ರಂದು ಕಳ್ಳತನ ಮಾಡುತ್ತಿರುವುದನ್ನು 12 ವರ್ಷದ ಬಾಲಕಿ ನೋಡಿದ್ದಳು. ಈಕೆ ತನ್ನ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡುವ ಭೀತಿಯಲ್ಲಿ ಆತ, ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದ. ಅದಕ್ಕೂ ಮುನ್ನ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಈತನಿಂದ ತೀವ್ರ ಹಲ್ಲೆಗೆ ಒಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲೆಯನ್ನು ಗಮನಿಸಿದ ದಾರಿ ಹೋಕರು ಆಕೆಯನ್ನು ಏಮ್ಸ್​ಗೆ ದಾಖಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net