'ನಾನು ಲಿಫ್ಟ್ ಕೊಡ್ತೀನಿ..' ಎಂದವನ ನಂಬಿ ಬೈಕ್​ ಹತ್ತಿದ ಮಹಿಳೆ; ಮನೆಯ ಬದಲು ಕಾಡಿಗೆ ಕರೆದೊಯ್ದ ಆತ ಮಾಡಿದ್ದು ಅನಾಚಾರ..!

Rape Attempt
Published on

ಉಡಪಿ: ಲಾಕ್​ಡೌನ್​ ನಿರ್ಬಂಧಗಳನ್ನು ಕೂಡ ಪಾಪಿಗಳು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಉಡುಪಿಯಲ್ಲಿ ನಡೆದ ಈ ಹೀನಾಯ ಘಟನೆ ಸಾಕ್ಷಿ.

ದಿನಸಿ ಕಿಟ್​ ಪಡೆದು ನಿರ್ಜನ ಪ್ರದೇಶದಲ್ಲಿ ಹೋಗುತ್ತಿದ್ದ ಮಹಿಳೆಗೆ ಲಿಫ್ಟ್​ ಕೊಡುವುದಾಗಿ ನಂಬಿಸಿದ ಕಾಮುಕನೋರ್ವ ಕಾಡಿಗೆ ಕರೆದುಕೊಂಡು ಹೋಗಿ ಅವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬ್ರಹ್ಮಾವರದ ಕುಂಜಾಲು ಜಂಕ್ಷನ್​ ಬಳಿ ನಡೆದಿದೆ.

ಈ ಮಹಿಳೆ ಬ್ರಹ್ಮಾವರದಿಂದ ಸಂತೆಕಟ್ಟೆಗೆ ದಿನಸಿ ಕಿಟ್​ ಪಡೆಯಲು ಬಂದಿದ್ದರು. ಕಿಟ್​ ಪಡೆದು ವಾಪಸ್​ ಹೋಗುತ್ತಿರುವಾಗ ಘಟನೆ ನಡೆದಿದೆ. ವಾಹನ ಸಂಚಾರ ಇಲ್ಲದ ಕಾರಣ ಮಹಿಳೆ ನಡೆದುಕೊಂಡೇ ಸಾಗುತ್ತಿದ್ದರು. ಆಗ ಬೈಕ್​ನಲ್ಲಿ ಬಂದ ವ್ಯಕ್ತಿ, ಯಾಕೆ ನಡೆದು ಹೋಗುತ್ತೀರಿ..ನಾನು ಆ ಕಡೆಗೇ ಹೋಗುತ್ತಿದ್ದೇನೆ ಎಂದು ಹೇಳಿ ನಂಬಿಸಿ ಕರೆದುಕೊಂಡು ಹೋಗಿದ್ದಾನೆ. ಸ್ವಲ್ಪ ದೂರ ಹೋಗಿ ದಾರಿ ತಪ್ಪಿಸಿ ಮಹಿಳೆಯರನ್ನು ಕಾಡಿಗೆ ಕರೆದೊಯ್ದು ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ.

ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದ ಮಹಿಳೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸರು ಆರೋಪಿಯ ಪತ್ತೆಕಾರ್ಯ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net