ಅಗ್ನಿಗೆ ಆಹುತಿಯಾಯ್ತು ಸಂಪೂರ್ಣ ಬೆಳೆ, ಮನೆ; ಲಾಕ್​ಡೌನ್​ ಸಂಕಷ್ಟದ ನಡುವೆ ಸೂರು ಕಳೆದುಕೊಂಡು ಕಂಗಾಲಾಗಿರುವ ರೈತ

Fire 2 May 20
Published on

ದಾವಣಗೆರೆ: ಅಗ್ನಿ ದುರಂತದಲ್ಲಿ ರೈತನೋರ್ವ ಬರೋಬ್ಬರಿ 2.5 ಲಕ್ಷ ರೂ. ಮೌಲ್ಯದ ಧಾನ್ಯ, ನಿತ್ಯಬಳಕೆ ವಸ್ತುಗಳನ್ನು ಕಳೆದುಕೊಂಡು ತೀವ್ರ ನಷ್ಟಕ್ಕೆ ಒಳಗಾಗಿದ್ದಾರೆ.

ಹರಪನಹಳ್ಳಿ ತಾಲೂಕಿನ ಅಸಗೋಡು ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ರೈತ ಶಂಭುಲಿಂಗಪ್ಪ ಎಂಬುವರ ಮನೆಯಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ 10 ಚೀಲ ರಾಗಿ, 3 ಚೀಲ ತೊಗರಿ, 5 ಚೀಲ ಶೇಂಗಾ, 1 ಚೀಲ ಅಕ್ಕಿ, 1 ಚೀಲ ಅವರೆಕಾಳು, 4 ಚೀಲ ಮೆಕ್ಕಜೋಳ, 1 ಚೀಲ ಹತ್ತಿ ಸೇರಿ ನಿತ್ಯ ಬಳಕೆ ವಸ್ತುಗಳು ಪೂರ್ತಿ ಬೆಂಕಿಗೆ ಆಹುತಿಯಾಗಿದೆ.

ಯಾವುದೇ ಜೀವ ಹಾನಿಯಾಗಲಿಲ್ಲ. ಆದರೆ ರೈತ ಲಾಕ್​ಡೌನ್​ ಸಂದರ್ಭದಲ್ಲಿ ಈ ರೈತ ಸೂರು ಕಳೆದುಕೊಂಡು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net