ತೆರೆ ಮೇಲೆ ಅಬ್ಬರಿಸಲಿದೆ ಮಕ್ಕಳ ನೆಚ್ಚಿನ ಶಕ್ತಿಮಾನ್​

ShaktiMaan
Published on

ಮುಂಬೈ: ನಾವು ಬಾಲ್ಯದಲ್ಲಿ ಇರಬೇಕಾದರೆ ಸೂಪರ್​ಮ್ಯಾನ್​, ಬ್ಯಾಟ್​,್ಯಾನ್​, ಐರನ್​ಮ್ಯಾನ್​ ಕಾರ್ಟೂನ್​ ಸೀರೀಸ್​ ಹಾಗೂ ಸಿನಿಮಾಗಳನ್ನು ನೋಡಿ ಬೆಳೆದಿದ್ದೇವೆ. ಅದೇ ರೀತಿ ಭಾರತೀಯ ಚಿತ್ರರಂಗದಲ್ಲಿ 90ರ ದಶಕದಲ್ಲಿ ಪ್ರಸಾರವಾಗುತ್ತಿದ್ದ ಶಕ್ತಿಮಾನ್​ ಧಾರಾವಾಹಿ ಎಳೆಯರಿಗಷ್ಟೇ ಅಲ್ಲ ವಯಸ್ಕರಿಗೂ ಬಹಳ ಇಷ್ಟವಾಗಿತ್ತು. ಭಾರತೀಯ ಟಿವಿ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಜನಪ್ರಿಯ ಧಾರಾವಾಹಿಗಳಲ್ಲಿ ಇದೂ ಕೂಡ ಒಂದಾಗಿತ್ತು.

ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಭಾರತದ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದ್ದ ಶಕ್ತಿಮಾನ್​ನನ್ನು ಸಿನಿಮಾ ರೂಪದಲ್ಲಿ ತೆರೆಗೆ ತರಲು ತಂಡ ಒಂದು ಸಜ್ಜಾಗಿದ್ದು, ಈ ಚಿತ್ರದಲ್ಲಿ ನಟ ರಣವೀರ್​ ಸಿಂಗ್​ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ. ಮಾಲಿವುಡ್​ನ ಖ್ಯಾತ ನಿರ್ದೇಶಕ ಬಾಸಿಲ್ ಜೋಸೆಫ್ ಈ ಚಿತ್ರಕ್ಕೆ ಆ್ಯಕ್ಷನ್ ಹೇಳಲಿದ್ದಾರೆ ಎಂದು ವರದಿಯಾಗಿದೆ.

ShaktiMaan

ಭಾರತೀಯ ಚಿತ್ರರಂಗದಲ್ಲಿ ಶಕ್ತಿಮಾನ್​ ಪಾತ್ರಕ್ಕೆ ತನ್ನದೇ ಆದ ಮಹತ್ವವಿದ್ದು, ಆ ಪಾತ್ರಕ್ಕೆ ಚ್ಯುತಿ ಬಾರದಂತೆ ನಿರ್ದೇಶಕ ಬಾಸಿಲ್​ ಜೋಸೆಫ್​ ಚಿತ್ರಕಥೆ ಸಿದ್ಧಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಚಿತ್ರದ ಪ್ರೀಪ್ರೊಡಕ್ಷನ್​ ಕೆಲಸಗಳು ಆರಂಭವಾಗಿದ್ದು, ಧಾರಾವಾಹಿಯ ಮುಖ್ಯ ಅಂಶಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ಗಂಗಾಧರ್ ಪಾತ್ರ, ನಾಯಕಿ ಪಾತ್ರಗಳು ಸಿನಿಮಾದಲ್ಲಿಯೂ ಹಾಗೆಯೇ ಇರಲಿವೆ. ಧಾರಾವಾಹಿಯಲ್ಲಿದ್ದ ವಿಲನ್​ಗಳೇ ಸಿನಿಮಾಗಳದಲ್ಲಿ ಇರಲಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಸ್ತುತ ಸಿಂಘಂ-3 ಹಾಗೂ ಡಾನ್​-3 ಚಿತ್ರೀಕರಣದಲ್ಲಿ ಬ್ಯುಸಿ ಇರುವ ರಣವೀರ್​ ಸಿಂಗ್​ ಇದು ಎರಡು ಮುಗಿಸಿಕೊಂಡು ಆ ಬಳಿಕ ಶಕ್ತಿಮಾನ್​ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಸುದ್ದಿ ಮೂಲಗಳ ಪ್ರಕಾರ ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಶಕ್ತಿಮಾನ್​ ಸಿನಿಮಾ ಸೆಟ್ಟೇರಲಿದೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net