More

    ಸದ್ಯ ಬಾಲಿವುಡ್​ನ ಆಳ್ತಿದ್ದಾರೆ ಇವರು ಎಂದ ರಣವೀರ್ ಸಿಂಗ್; ಹೇಳಿದ್ದು ನಟನಿಗೋ? ನಿರ್ದೇಶಕರಿಗೋ?

    ಮುಂಬೈ: ಬಾಲಿವುಡ್​ನ ಸ್ಟಾರ್​ ನಟ ರಣವೀರ್ ಸಿಂಗ್ ಸದ್ಯ ಟ್ರೆಂಡಿಂಗ್​ ನಟರ ರೇಸ್​ನಲ್ಲಿದ್ದು, ಇತ್ತೀಚೆಗಷ್ಟೇ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪ್ರೀ-ವೆಡ್ಡಿಂಗ್​ನ ಅದ್ದೂರಿ ಸಮಾರಂಭಕ್ಕೆ ತಮ್ಮ ಪತ್ನಿ, ನಟಿ ದೀಪಿಕಾ ಪಡುಕೋಣೆ ಜತೆಗೆ ಆಗಮಿಸಿ, ಸಂಭ್ರಮದಲ್ಲಿ ಪಾಲ್ಗೊಂಡರು. ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಖ್ಯಾತ ನಿರ್ದೇಶಕನನ್ನು ಕಂಡು, ಇವರು ಸದ್ಯ ಚಿತ್ರರಂಗದಲ್ಲಿ ಭಾರೀ ಬ್ಯುಸಿಯಿದ್ದಾರೆ. ಇವರಿಗಾಗಿ ಬಿಟೌನ್​ನ ನಟರು ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಲೋಕ ಗೆಲ್ಲಲು ಬಿಜೆಪಿ ಸಂಕಲ್ಪಪತ್ರ: ವಿಶೇಷ ಜನಮತ ಅಭಿಯಾನಕ್ಕೆ ಚಾಲನೆ

    ಅಸಲಿಗೆ ಆ ನಿರ್ದೇಶಕ ಬೇರಾರು ಅಲ್ಲ, ಶಾರೂಖ್ ಅಭಿನಯದ ‘ಜವಾನ್’ ಚಿತ್ರವನ್ನು ನಿರ್ದೇಶಿಸಿದ ಅಟ್ಲೀ ಕುಮಾರ್. ಜವಾನ್‌ ಮೂಲಕ ಬಾಲಿವುಡ್​ನಲ್ಲಿ ತಮ್ಮ ಪ್ರತಿಭೆಯನ್ನು ಮತ್ತಷ್ಟು ಪರಿಚಯಿಸಿದ ಅಟ್ಲೀ, ಈ ಚಿತ್ರದ ಬಳಿಕ ಹಲವಾರು ದೊಡ್ಡ ಆಫರ್​ಗಳು ಸ್ವೀಕರಿಸಿದರು. ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ ಬ್ಲಾಕ್‌ಬಸ್ಟರ್ ಚಿತ್ರವಾಗಿ ಹೊರಹೊಮ್ಮಿದ ಜವಾನ್​ ಚಿತ್ರಕ್ಕೆ ಪ್ರೇಕ್ಷಕರಿಂದಲೂ ಅಭೂತಪೂರ್ವ ಬೆಂಬಲ ದೊರಕಿತು.

    ಈ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಸಖತ್ ಬ್ಯುಸಿಯಾಗಿರುವ ನಿರ್ದೇಶಕ ತಮ್ಮ ಪತ್ನಿಯೊಂದಿಗೆ ಅನಂತ್ ಅಂಬಾನಿ ಅವರ ಪೂರ್ವ ವಿವಾಹ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಿರ್ದೇಶಕನನ್ನು ನೋಡಿ ಮಾತನಾಡಿದ ರಣವೀರ್, “ನಮ್ಮ ಎಲ್ಲಾ ಬಾಂಬೆ ಹೀರೋಗಳು ಅಟ್ಲಿಯನ್ನು ಹಿಡಿಯಲು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಇವರು ತುಂಬ ಬ್ಯುಸಿಯಾಗಿದ್ದು, ಬಾಲಿವುಡ್​ನ ಆಳುತ್ತಿದ್ದಾರೆ” ಎಂದು ಹೇಳಿದರು,(ಏಜೆನ್ಸೀಸ್).

    ಮದುವೆಗೂ ಮುನ್ನ ಆರೋಗ್ಯ ಸಮಸ್ಯೆ ತೋಡಿಕೊಂಡ ಅನಂತ್​; ಮಗನ ಮಾತಿಗೆ ಕಣ್ಣೀರಿಟ್ಟ ಮುಖೇಶ್ ಅಂಬಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts