ರಣವೀರ್​ ಹೊಸ ವೇಷ; ಹೆಂಡತಿ ಬಟ್ಟೆ, ಬ್ಯಾಗು ತೊಟ್ಟ ಗಂಡ ಎಂದು ಅಣಕಿಸಲಾರಂಭಿಸಿದ ನೆಟ್ಟಿಗರು

ranveer
Published on

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಅವರ ನಟನೆಗೆ ಹೆಚ್ಚು ವೈರಲ್ ಆಗೋದು ಅವರ ವೇಷಭೂಷಣಗಳಿಂದಲೇ. ಸದಾ ವಿಚಿತ್ರ ಬಟ್ಟೆಯನ್ನು ತೊಟ್ಟು ಟ್ರೋಲಿಗರ ಬಾಯಿಗೆ ಗುರಿಯಾಗುವ ರಣವೀರ್​ ಈ ಬಾರಿಯೂ ಅಂತದ್ದೇ ಕೆಲಸ ಮಾಡಿದ್ದಾರೆ.

ನೀಲಿ ಬಣ್ಣದ ಶೈನಿಂಗ್ ಬಟ್ಟೆ. ಉದ್ದ ಕೂದಲು, ಎದೆ ತುಂಬುವ ಬಂಗಾರದ ಸರ, ಕಣ್ಣಿಗೆ ಕಪ್ಪು ಗ್ಲಾಸ್, ಕೈಯಲ್ಲೊಂದು ಹೆಣ್ಣು ಮಕ್ಕಳ ಹ್ಯಾಂಡ್​ ಬ್ಯಾಗ್! ಇದು ರಣವೀರ್​ನ ಹೊಸ ವೇಷದ ಒಂದು ಸಣ್ಣ ಝಲಕ್. ಅಂದ ಹಾಗೆ ಅವರಿಗೆ ಈ ಫ್ಯಾಷನ್ ಉಡುಗೆ ನೀಡಿ, ಫೋಟೋಶೂಟ್ ಮಾಡಿಸಿದ್ದು ಪ್ರಸಿದ್ಧ ಗುಸ್ಸಿ ಸಂಸ್ಥೆ. ಅದರ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, 'Alessandro, my beloved' ಎಂದು ಬರೆದುಕೊಂಡಿದ್ದಾರೆ.

ರಣವೀರ್ ಅವರ ಈ ಫೋಟೊಗಳು ಟ್ರೋಲಿಗರಿಗೆ ಆಹಾರವಾಗಿದೆ. ದೀಪಿಕಾ ಯಾವುದೇ ಬಟ್ಟೆ, ಬ್ಯಾಗ್ ತೆಗೆದುಕೊಂಡರೂ ರಣವೀರ್ ಅದನ್ನು ಹೀಗೆ ಟ್ರೈ ಮಾಡ್ತಾರೆ ಎನ್ನುವುದರಿಂದ ಹಿಡಿದು, ಈ ಹುಚ್ಚು ಸರಿಯಾಗುವುದಿಲ್ಲ ಎನ್ನುವವರೆಗೂ ವಿಧ ವಿಧವಾಗಿ ಟ್ರೋಲ್ ಮಾಡಲಾರಂಭಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net