ರಾವಣ ಆಗ್ತಾರಾ ರಣವೀರ್? ... ಸೀತೆಯ ದೃಷ್ಟಿಕೋನದಲ್ಲಿ ಇನ್ನೊಂದು ರಾಮಾಯಣ

Ranveer Singh - Final
Published on

ಮುಂಬೈ: ಬಾಲಿವುಡ್ ಮಂದಿಗೆ ರಾಮಾಯಣದ ಮೇಲೆ ಪ್ರೀತಿ ಹೆಚ್ಚಾಗುತ್ತಿದೆ. ಈಗಾಗಲೇ ರಾಮಾಯಣವನ್ನಾಧರಿಸಿ, ‘ಆದಿಪುರುಷ್’ ಎಂಬ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಈ ಚಿತ್ರದಲ್ಲಿ ಪ್ರಭಾಸ್ ಮತ್ತು ಸೈಫ್​ ಅಲಿ ಖಾನ್, ಕ್ರಮವಾಗಿ ರಾಮ-ರಾವಣರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೊಂದು ಚಿತ್ರದಲ್ಲಿ ಮಹೇಶ್ ಬಾಬು ಮತ್ತು ಹೃತಿಕ್ ರೋಶನ್, ರಾಮ-ರಾವಣರಾಗಿ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದಲ್ಲದೆ ರಾಮಾಯಣವನ್ನಾಧರಿಸಿ ಇನ್ನೊಂದು ಚಿತ್ರ ನಿರ್ಮಾಣವಾಗುವ ಸಾಧ್ಯತೆ ಇದ್ದು, ಇದರಲ್ಲಿ ರಾವಣನಾಗಿ ರಣವೀರ್ ಸಿಂಗ್‌ಗೆ ಆರ್ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಎಸ್.ಎಸ್. ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್, ಇದೀಗ ಸೀತೆಯ ದೃಷ್ಟಿಕೋನದಲ್ಲಿ ರಾಮಾಯಣವನ್ನು ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಭಟ್ ಅಥವಾ ಕರೀನಾ ಕಪೂರ್, ಸೀತೆಯಾಗಿ ಕಾಣಿಸಿಕೊಳ್ಳಬಹುದು ಎಂಬ ಸುದ್ದಿ ಇದೆ. ರಾಮನ ಪಾತ್ರ ಯಾರು ಮಾಡುತ್ತಾರೆ ಎಂಬ ವಿಷಯ ಅಂತಿಮವಾಗಿಲ್ಲದಿದ್ದರೂ, ರಾವಣನ ಪಾತ್ರವನ್ನು ರಣವೀರ್‌ಗೆ ಆರ್ ಮಾಡಲಾಗಿದೆಯಂತೆ. ರಣವೀರ್ ಒಪ್ಪುತ್ತಾರೋ, ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಚಿತ್ರಕ್ಕೆ ‘ಸೀತೆ’ ಎಂಬ ಹೆಸರಿಡಲಾಗಿದ್ದು, ಇದು ಸಹ ‘ಬಾಹುಬಲಿ’ಯಂತೆ ದೊಡ್ಡ ಕ್ಯಾನ್ವಸ್‌ನ ಮತ್ತು ದೊಡ್ಡ ಬಜೆಟ್‌ನ ಚಿತ್ರವಾಗಲಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net