More

    ತೆಲುಗಿಗೆ ದಿಯಾ ದೀಕ್ಷಿತ್; ಕನ್ನಡಕ್ಕೆ ಆಣಿ ಮುತ್ತುಗಳು ಹೆಸರಲ್ಲಿ ಡಬ್

    ಬೆಂಗಳೂರು: ‘ದಿಯಾ’ ನಂತರ ಪೃಥ್ವಿ ಅಂಬರ್ ಮತ್ತು ಖುಷಿ ಹಲವು ಚಿತ್ರಗಳಲ್ಲಿ ನಟಿಸುತ್ತಿರುವ ಸುದ್ದಿಯಾಯಿತು. ಆದರೆ, ಚಿತ್ರದಲ್ಲಿ ಇನ್ನೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ದೀಕ್ಷಿತ್ ಶೆಟ್ಟಿ ಹೆಸರು ಮಾತ್ರ ಯಾವ ಹೊಸ ಚಿತ್ರದಲ್ಲೂ ಕಾಣಿಸಲಿಲ್ಲ. ಇಷ್ಟಕ್ಕೂ ದೀಕ್ಷಿತ್ ಎಲ್ಲಿ ಮತ್ತು ಏನು ಮಾಡುತ್ತಿದ್ದರು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

    ದೀಕ್ಷಿತ್ ಶೆಟ್ಟಿ, ಸದ್ದಿಲ್ಲದೆ ತೆಲುಗು ಚಿತ್ರವೊಂದರಲ್ಲಿ ನಟಿಸಿಬಂದಿದ್ದಾರೆ. ಆ ಚಿತ್ರ ‘ಆಣಿ ಮುತ್ತುಗಳು’ ಎಂಬ ಹೆಸರಿನಲ್ಲಿ ಕನ್ನಡಕ್ಕೂ ಡಬ್ ಆಗಿ ಬಿಡುಗಡೆಯಾಗುತ್ತಿದೆ.ಇದೊಂದು ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಕಿವಿ ಕೇಳಿಸದ, ಮಾತು ಬಾರದ ಮತ್ತು ಕಣ್ಣು ಕಾಣಿಸದ ಮೂವರು ಸ್ನೇಹಿತರ ಸುತ್ತ ಈ ಚಿತ್ರದ ಕಥೆ ಸುತ್ತಲಿದೆಯಂತೆ. ಇದರಲ್ಲಿ ಮೂಗನ ಪಾತ್ರದಲ್ಲಿ ದೀಕ್ಷಿತ್ ಶೆಟ್ಟಿ ನಟಿಸಿದ್ದಾರೆ. ಇನ್ನುಳಿದಂತೆ ಕಿವುಡನ ಪಾತ್ರದಲ್ಲಿ ಶ್ರೀನಿವಾಸ್ ರೆಡ್ಡಿ ಮತ್ತು ಕುರುಡನ ಪಾತ್ರದಲ್ಲಿ ಅಚ್ಯುತ್ ರಾಮರಾವ್ ನಟಿಸಿದ್ದಾರೆ.

    ಕೊಲೆಯೊಂದರ ಸುತ್ತ ಸುತ್ತುವ ಈ ಚಿತ್ರದಲ್ಲಿ ಪೊಲೀಸ್ ತನಿಖೆ, ಹುಡುಕಾಟ ಪ್ರೇಮಕಥೆ ಎಲ್ಲವೂ ಇದೆಯಂತೆ. ತ್ವಿಷಾ ಶರ್ಮಾ ನಾಯಕಿಯಾಗಿ ನಟಿಸಿದ್ದು, ದೀಕ್ಷಿತ್​ಗೆ ಜೋಡಿಯಾಗಿದ್ದಾರೆ. ಶ್ವೇತಾ ವರ್ವ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ಅಪ್ಪಾರ್ಲ ಸಾಯಿ ಕಲ್ಯಾಣ್ ಕಥೆ-ಚಿತ್ರಕಥೆ ಬರೆದಿದ್ದು, ಅಭಿಲಾಷ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಅಚ್ಯುತ್ ರಾಮರಾವ್ ನಿರ್ವಿುಸಿರುವ ಈ ಚಿತ್ರಕ್ಕೆ ಸುರೇಶ್ ಬೊಬ್ಲಿ ಸಂಗೀತವಿದೆ. ಈಗಾಗಲೇ ಬಹುತೇಕ ಕೆಲಸಗಳು ಮುಗಿದಿದ್ದು, ಲಾಕ್​ಡೌನ್ ಮುಗಿದ ನಂತರ ಚಿತ್ರವು ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts