ಕಾರ್ಪಾಡಿ ದೇವಸ್ಥಾನದಲ್ಲಿ ರಂಗಪೂಜೆ ವೈಭವ

New Project (7)
Published on

ಪುತ್ತೂರು ಗ್ರಾಮಾಂತರ: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವಕ್ಕೆ ಸಿದ್ಧತೆ ನಡೆಯುತ್ತಿದ್ದು, ಕಿರುಷಷ್ಠಿಯಂದು ನಡೆಯುವ ಈ ಜಾತ್ರೋತ್ಸವಕ್ಕೆ ಪೂರ್ವಭಾವಿಯಾಗಿ ಒಂದು ಮಂಡಲ (48 ದಿನಗಳ) ಪರ್ಯಂತ ರಂಗಪೂಜೆ ನಡೆದು ಬರುವುದು ಇಲ್ಲಿನ ವಿಶೇಷತೆ. ಇಲ್ಲಿನ ಒಂದು ಮಂಡಲದ ರಂಗಪೂಜೆಗೆ ವಿಶೇಷ ಪ್ರಧಾನ್ಯತೆಯೂ ಇದೆ.

ನ.18ರಂದು ಆರಂಭಗೊಂಡಿರುವ ರಂಗಪೂಜೆ ಜ.4ರಂದು ದೊಡ್ಡ ರಂಗಪೂಜೆ ನಡೆಯುವ ಮೂಲಕ ಸಮಾಪನಗೊಳ್ಳುತ್ತದೆ. ಬಳಿಕ ಸುಬ್ರಹ್ಮಣ್ಯ ದೇವರ ಜಾತ್ರೋತ್ಸವ ಸಂಭ್ರಮ, ಜ.9ರಂದು ಬೆಳಗ್ಗೆಯಿಂದ ಕ್ಷೇತ್ರದ ಉಳ್ಳಾಲ್ತಿ-ಉಳ್ಳಾಕುಲು ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.

ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ.5 ಹಾಗೂ 6ರಂದು ವಾರ್ಷಿಕ ಜಾತ್ರೋತ್ಸವ ನಡೆಯಲಿದೆ. ಡಿ.5ರಂದು 18ನೇ ದಿನದ ರಂಗಪೂಜೆ ನಡೆದಿದೆ. ಈ ಹದಿನೆಂಟು ದಿನದಲ್ಲಿ 128 ರಂಗಪೂಜಾ ಸೇವೆ ನಡೆದಿವೆ. ಉಳಿದಿರುವ 30 ದಿನಗಳಲ್ಲಿ ರಂಗಪೂಜೆ ನಡೆಯಲಿದ್ದು, ರಂಗಪೂಜೆ ಬಳಿಕ ರಾತ್ರಿ ಅನ್ನಸಂತರ್ಪಣೆ ನಡೆಯುತ್ತಿದೆ. ಭಕ್ತರು ಸುಬ್ರಹ್ಮಣ್ಯ ದೇವರ ಸಾನಿಧ್ಯದಲ್ಲಿ ರಂಗಪೂಜೆ ನಡೆಸಿ ಕೃತಾರ್ಥರಾಗಬಹುದು. ಮಾಹಿತಿಗೆ ಮೊ.9606515600 ಸಂಖ್ಯೆ ಸಂಪರ್ಕಿಸಬಹುದು ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ರಾಧಾಕೃಷ್ಣ ರೈ ಬೂಡಿಯಾರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net