ಹಿರೇಮಹಾಲಿಂಗೇಶ್ವರ ದೇಗುಲದಲ್ಲಿ ರಂಗಪೂಜೆ

temple
ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರು ದೇವರಿಗೆ ಪೂಜೆ ಸಲ್ಲಿಸಿದರು.
Published on

ಕೋಟ: ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನಲ್ಲಿ ಅರ್ಚಕ ಸುಬ್ರಹ್ಮಣ್ಯ ಅಡಿಗ ಸೇವಾರ್ಥ ರುದ್ರಹೋಮ ನೆರವೇರಿತು. ರಾತ್ರಿ ಕಿರಿ ಅಗಲು ರಂಗಪೂಜೆ, ವಿವಿಧ ತಂಡಗಳಿಂದ ಭಜನೆ, ಅಮೃತೇಶ್ವರಿ ಯಕ್ಷಗಾನ ಮಂಡಳಿಯ ವತಿಯಿಂದ ಯಕ್ಷಗಾನ ಬಯಲಾಟ ನಡೆಯಿತು. ದೇಗುಲದ ಪ್ರದಾನ ಅರ್ಚಕ ಸದಾಶಿವ ಅಡಿಗ, ರಾಜೇಂದ್ರ ಅಡಿಗ, ತೀರ್ಥೇಶ್ ಭಟ್, ವರದರಾಜ ಭಟ್, ಅನಂತಮೂರ್ತಿ ಭಟ್, ಶಿವಮೂರ್ತಿ ಭಟ್ ಪೂಜಾ ವಿಧಿವಿಧಾನಗಳನ್ನು ನೆರವೆರಿಸಿದರು. ಹಿರೇಮಹಾಲಿಂಗೇಶ್ವರ ಮಿತ್ರ ವೃಂದ ಕಾರ್ಯದರ್ಶಿ ಜಿ.ಎಸ್.ಆನಂದ್ ದೇವಾಡಿಗ, ಅಜಿತ್ ದೇವಾಡಿಗ, ದಿನೇಶ್ ದೇವಾಡಿಗ, ರಾಜೇಶ್ ದೇವಾಡಿಗ, ವಿನೋದ ದೇವಾಡಿಗ, ರಕ್ಷತ್ ಆಚಾರ್, ಅವಿನಾಶ್ ಆಚಾರ್, ಚಂದ್ರ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net