ಸತೀಶ್​ ಜಾರಕಿಹೊಳಿ Hindu ವಿರೋಧಿ ಹೇಳಿಕೆಗೆ ಕಾಂಗ್ರೆಸ್​ನಲ್ಲೇ ವಿರೋಧ...

satish jarakiholi
Published on

ಬೆಂಗಳೂರು: ‘ಹಿಂದೂ Hindu ಪದದ ಅರ್ಥವೇ ಅಶ್ಲೀಲ...’ ಎಂದು ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ Satish Jarakiholi ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈಗ ಕಾಂಗ್ರೆಸ್​ನಲ್ಲೇ ಈ ವಿಚಾರವಾಗಿ ವಿರೋಧ ವ್ಯಕ್ತವಾಗಿದೆ.

ಸತೀಶ್ ಜಾರಕಿಹೊಳಿ Satish Jarakiholi ಹೇಳಿಕೆಯನ್ನು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ Randeep Singh Surjewala ಖಂಡಿಸಿದ್ದಾರೆ. ಟ್ವೀಟ್‌ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ರಣದೀಪ್ ಸಿಂಗ್ ಸುರ್ಜೇವಾಲ ‘ಹಿಂದೂ Hindu ಧರ್ಮ ಒಂದು ಜೀವನ ವಿಧಾನವಾಗಿದೆ’ ಎಂದಿದ್ದಾರೆ.

‘ಪ್ರತಿಯೊಂದು ಧರ್ಮ ಮತ್ತು ನಂಬಿಕೆಯನ್ನು ಗೌರವಿಸಿಕೊಂಡು ಕಾಂಗ್ರೆಸ್ Congress ಈ ರಾಷ್ಟ್ರವನ್ನು ನಿರ್ಮಿಸಿದೆ. ಸತೀಶ್ ಜಾರಕಿಹೊಳಿ Satish Jarakiholi ಅವರ ಹೇಳಿಕೆ ಅತ್ಯಂತ ದುರದೃಷ್ಟಕರ ಮತ್ತು ತಿರಸ್ಕಾರಕ್ಕೆ ಅರ್ಹವಾದದ್ದು. ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ’ ಎಂದು ರಣದೀಪ್​ ಸುರ್ಜೇವಾಲ ಟ್ವೀಟ್​ನಲ್ಲಿ ಬರೆದಿದ್ದಾರೆ.

ದೇಶದಲ್ಲಿ ಕಾಂಗ್ರೆಸ್​ ಹಿಂದು Hindu ವಿರೋಧಿ ಎಂಬ ಹಣೆಪಟ್ಟಿಯನ್ನು ಕಳೆದುಕೊಳ್ಳಲು ಶತಾಯಗತಾಯ ಪ್ರಯತ್ನ ಪಡುತ್ತಿದೆ. ರಾಹುಲ್​ ಗಾಂಧಿ Rahul Gandhi ಜನಿವಾರ ಧರಿಸಿದ್ದೂ ವಿವಾದಕ್ಕೆ ಕಾರಣವಾಗಿತ್ತು. ಈಗ ಸತೀಶ್​ ಜಾರಕಿಹೊಳಿ Satish Jarakiholi ಹೇಳಿಕೆ ಕಾಂಗ್ರೆಸ್​ಗೆ ಸಾಕಷ್ಟು ಹಾನಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ಕಾಂಗ್ರೆಸ್​ Congress ತನ್ನನ್ನು ತಾನು ಈ ಹೇಳಿಕೆಯಿಂದ ದೂರ ಸರಿಸಿಕೊಂಡಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net