ಅನುಷ್ಕಾ ಮೇಲೆ ಕ್ರಶ್ ಆಗಿತ್ತಂತೆ ರಣಬೀರ್​ಗೆ!

Ranbir Kapoor - Anushka Shetty - Final
Published on

ಮುಂಬೈ: ಬಾಲಿವುಡ್​ ನಟ ರಣಬೀರ್​ ಕಪೂರ್​​ಗೆ ಜೀವನದಲ್ಲಿ ಅದೆಷ್ಟು ಜನರ ಮೇಲೆ ಕ್ರಶ್​ ಆಗಿದೆಯೋ, ಅದೆಷ್ಟು ಜನರ ಜತೆಗೆ ಅವರಿಗೆ ಪ್ರೀತಿ ಇತ್ತೋ ಲೆಕ್ಕ ಹಾಕುವುದು ಕಷ್ಟ. ರಣಬೀರ್​ ತಮ್ಮ ಕೆಲಸಕ್ಕಿಂತ ಹೆಚ್ಚಾಗಿ ತಮ್ಮ ಲವ್​ ಅಫೇರ್​ಗಳಿಂದಲೇ ಒಂದು ಕಾಲದಲ್ಲಿ ಹೆಚ್ಚು ಸುದ್ದಿಯಾದರು ಎಂದರೆ ತಪ್ಪಿಲ್ಲ.

ಈಗ್ಯಾಕೆ ಈ ವಿಷಯವೆಂದರೆ, ಅಷ್ಟೆಲ್ಲ ನಟಿಯರ ಜತೆಗೆ ಅನುಷ್ಕಾ ಶೆಟ್ಟಿ ಮೇಲೂ ರಣಬೀರ್​​ಗೆ ಅದೊಮ್ಮೆ ಕ್ರಶ್​ ಆಗಿತ್ತಂತೆ. ಈ ವಿಷಯವನ್ನು ಕೆಲವು ವರ್ಷಗಳ ಹಿಂದೆ ಅವರೇ ಹೇಳಿಕೊಂಡಿದ್ದರು.

ಮೂರು ವರ್ಷಗಳ ಹಿಂದೆ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ದಕ್ಷಿಣ ಭಾರತದ ಯಾವ ನಟಿ ನಿಮಗೆ ತುಂಬಾ ಇಷ್ಟ ಎಂದು ಪ್ರಶ್ನಿಸಿದಾಗ, ರಣಬೀರ್ ಹೇಳಿದ್ದು ಅನುಷ್ಕಾ ಅವರ ಹೆಸರನ್ನು. ಬಾಹುಬಲಿ ಚಿತ್ರ ನೋಡಿ ಅನುಷ್ಕಾ ಮೇಲೆ ಕ್ರಶ್​ ಆಯಿತು ಎಂದು ಹೇಳಿಕೊಂಡಿದ್ದರು ರಣಬೀರ್​. ಅಷ್ಟೇ ಅಲ್ಲ, ಅನುಷ್ಕಾ ಜತೆಗೆ ನಟಿಸಬೇಕು ಎಂದು ಆಸೆ ವ್ಯಕ್ತಪಡಿಸಿದ್ದರು.

ಆದರೆ, ರಣಬೀರ್​ ಅವರ ಆಸೆ ಇದುವರೆಗೂ ಆಸೆಯಾಗಿಯೇ ಉಳಿದುಕೊಂಡಿದೆ. ರಣಬೀರ್​ ಮತ್ತು ಅನುಷ್ಕಾ ಇದುವರೆಗೂ ಯಾವುದೇ ಚಿತ್ರದಲ್ಲೂ ನಟಿಸುವುದಕ್ಕೆ ಸಾಧ್ಯವಾಗಿಲ್ಲ. ಒಂದು ಕಡೆ ಅನುಷ್ಕಾ ಇತ್ತೀಚಿನ ವರ್ಷಗಳಲ್ಲೇ ನಟಿಸುವುದನ್ನು ಕಡಿಮೆ ಮಾಡಿದ್ದಾರೆ. ಇನ್ನೊಂದು ಕಡೆ ರಣಬೀರ್​, ಬಾಲಿವುಡ್​ನಲ್ಲಿ ತಮ್ಮದೇ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರೂ ಜತೆಯಾಗಿ ನಟಿಸುವುದಕ್ಕೆ ಅದ್ಯಾವಾಗ ಮುಹೂರ್ತ ಕೂಡಿಬರುತ್ತದೋ ಎಂಬುದು ಯಾರಿಗೂ ಗೊತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net