More

    2023ರಲ್ಲಿ 900 ಕೋಟಿ ರೂ. ಗಳಿಸಿದ ಬಾಲಿವುಡ್​ನ ಮೂರನೇ ಚಿತ್ರ ಇದೇ!

    ಮುಂಬೈ: ಬಾಲಿವುಡ್​ ಅಂಗಳದಲ್ಲಿ​ ಕಿಂಗ್ ಖಾನ್ ಅಭಿನಯದ ‘ಜವಾನ್’ ಮತ್ತು ‘ಪಠಾಣ್’ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಗಳಿಸಿದ್ದ ಮೊತ್ತವನ್ನು ಇದೀಗ ಬಾಲಿವುಡ್​ನ ಮತ್ತೊಬ್ಬ ಸ್ಟಾರ್​ ನಟನ ಚಿತ್ರ ತಲುಪುವಲ್ಲಿ ಯಶಸ್ವಿಯಾಗಿದ್ದು, ಶಾರುಖ್​ ಅವರ ಎರಡು ಚಿತ್ರಗಳ ಬಳಿಕ ಜಾಗತಿಕವಾಗಿ 900 ಕೋಟಿ ರೂ. ತಲುಪಿದ ಮೂರನೇ ಚಿತ್ರ ಇದಾಗಿದೆ. ಹಾಗಾದ್ರೆ, ಯಾವ ನಟನ ಸಿನಿಮಾವಿದು? ಎಂಬುದರ ವಿವರ ಹೀಗಿದೆ.

    ಇದನ್ನೂ ಓದಿ: ರಾಮಂದಿರಕ್ಕಾಗಿ 30ವರ್ಷ ಮೌನವ್ರತ.. ಜ.22ರಿಂದ ಮಾತನಾಡಲಿದ್ದಾರೆ ಜಾರ್ಖಾಂಡ್​ ಮಹಿಳೆ!

    ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಹಾಗೂ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿದ ‘ಅನಿಮಲ್’​ ಕಳೆದ ವರ್ಷ ಸಿಕ್ಕಾಪಟ್ಟೆ ಗದ್ದಲದ ಮಧ್ಯೆಯೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆಯನ್ನು ಕಂಡಿತು. ಬಿಡುಗಡೆಯಾದ ಮೊದಲ ದಿನವೇ ಭಾರೀ ವಿವಾದಕ್ಕೆ ತುತ್ತಾದ ಚಿತ್ರವು, ಕಲೆಕ್ಷನ್​ ಸಾಲಿನಲ್ಲಿ ಮಾತ್ರ ಕುಸಿಯಲಿಲ್ಲ ಎಂಬುದು ಆಶ್ಚರ್ಯ! ಇದೀಗ ಈ ಚಿತ್ರ ವಿಶ್ವದಾದ್ಯಂತ 900 ಕೋಟಿ ರೂ. ಗಡಿ ದಾಟಿದ ಮೂರನೇ ಬಾಲಿವುಡ್ ಚಿತ್ರವಾಗಿ ಹೊರಹೊಮ್ಮಿದೆ.

    ಸಿನಿಪ್ರೇಕ್ಷಕರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದ ‘ಅನಿಮಲ್’ ಚಿತ್ರವು, ಅಶ್ಲೀಲ ಸೀನ್​ಗಳನ್ನು ಒಳಗೊಂಡಿದೆ. ಇಂತಹ ಸಿನಿಮಾಗಳನ್ನು ನೋಡಲು ಕಷ್ಟವಾಗುತ್ತದೆ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಿಸಿದ್ದರು. ಸರಣಿ ಟೀಕೆಗಳ ಮಧ್ಯೆಯೂ ಇದೀಗ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಗಳಿಕೆ ಕಂಡಿದೆ.

    ಇದನ್ನೂ ಓದಿ: ಬಿಸಿ.. ಬಿಸಿ ಬಿಸ್ಕೆಟ್ ಆಮ್ಲೆಟ್; ವಿಡಿಯೋ ನೋಡಿ.. ನೀವು ಮಾಡಿ ಟೆಸ್ಟ್​ ಮಾಡಿ…

    ಚಿತ್ರಮಂದಿರಗಳಿಗೆ ಹೆಚ್ಚಿನ ಜನರನ್ನು ಕರೆತರುವ ಪ್ರಯತ್ನದಲ್ಲಿ ತೊಡಗಿರುವ ಚಿತ್ರತಂಡ ಸದ್ಯ ಹೊಸ ಪ್ಲ್ಯಾನ್​ವೊಂದನ್ನು ಜಾರಿಗೊಳಿಸಿದೆ. ಕೇವಲ 100ರೂ.ಗೆ ಟಿಕೆಟ್​ ಖರೀದಿಸಿ, ಸಿನಿಮಾ ನೋಡಿ ಎಂಬ ಹೊಸ ಆಫರ್ ಅನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಚಿತ್ರತಂಡ​ ಘೋಷಿಸಿದೆ. ಚಿತ್ರದಲ್ಲಿ ರಣಬೀರ್ ಕಪೂರ್, ಅನಿಲ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).

    ಇನ್ಮುಂದೆ ದರ್ಶನ್ ‘ಕರುನಾಡ ಅಧಿಪತಿ’; ಯಾರು ಕೊಟ್ರು ಈ ಬಿರುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts