More

    ರಾಮಂದಿರಕ್ಕಾಗಿ 30ವರ್ಷ ಮೌನವ್ರತ.. ಜ.22ರಿಂದ ಮಾತನಾಡಲಿದ್ದಾರೆ ಜಾರ್ಖಾಂಡ್​ ಮಹಿಳೆ!

    ಧನ್‌ಬಾದ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಂತರ ಮೌನ ಮುರಿಯುತ್ತೇನೆ ಎಂದು ಶಪಥಗೈದಿದ್ದ ಮಹಿಳೆಯೊಬ್ಬರು ಬರೋಬ್ಬರಿ 30 ವರ್ಷದ ನಂತರ ಮಾತನಾಡಲಿದ್ದಾರೆ. ಜಾರ್ಖಂಡ್‌ನ 85 ವರ್ಷದ ಸರಸ್ವತಿ ದೇವಿ 1992ರ ಡಿ.6ರಂದು ಜನ್ಮಸ್ಥಾನದಲ್ಲಿ ದಾಳಿಕೋರರು ನಿರ್ಮಿಸಿದ್ದ ಕಟ್ಟಡ ಕರಸೇವಕರಿಂದ ನೆಲಸಮವಾಗಿದ್ದು, ಅಂದು ಸರಸ್ವತಿ ದೇವಿ ಮೌನವ್ರತ ಕೈಗೊಂಡಿದ್ದರು.

    ಇದನ್ನೂ ಓದಿ: ರಾಮಾಯಣದ ಭಿನ್ನರಾಶಿ

    ಜ.22 ರಂದು ಸರಸ್ವತಿ ದೇವಿ ಅಗರ್ವಾಲ್ ತಮ್ಮ ಕನಸು ನನಸಾಗುತ್ತಿರುವುದರಿಂದ ಅಂದಿನಿಂದ ಮತ್ತೆ ಮಾತನಾಡಲು ತೀರ್ಮಾನಿಸಿದ್ದಅರೆ. 30 ವರ್ಷದ ಅವರ ಮೌನ ದೀಕ್ಷೆ ಕೊನೆಗೊಳ್ಳುವ ಕಾಲ ರಾಮಮಂದಿರ ನಿರ್ಮಾಣದೊಂದಿಗೆ ಸನ್ನಿಹಿತವಾಗಿದೆ.

    ಮೌನಿ ಮಾತಾ ಎಂದೇ ಸರಸ್ವತಿ ದೇವಿಯನ್ನು ಜನರು ಕರೆಯುತ್ತಿದ್ದರು. ತನ್ನ ಕುಟುಂಬದ ಸದಸ್ಯರು ಅಥವಾ ಸಾರ್ವಜನಿಕರೊಂದಿಗೆ ಕೇವಲ ಸಂಕೇತದಿಂದ ಸಂವಹನ ನಡೆಸುತ್ತಿದ್ದ ಆಕೆ ಕೆಲವು ಸಂದರ್ಭಗಳಲ್ಲಿ ಕಾಗದದ ಮೇಲೆ ದೊಡ್ಡ ಅಕ್ಷರದಲ್ಲಿ ಬರೆದು ತೋರಿಸುತ್ತಿದ್ದರು. ಕಾಮೆಂಟ್​ಗಳನ್ನು ಸಹ ಬರೆಯುತ್ತಿದ್ದರು.

    ರಾಮಮಂದಿರ ಉದ್ಘಾಟನೆ ಸಂದರ್ಭ ರೈಲಿನಲ್ಲಿ ಅಯೋಧ್ಯೆಗೆ ತೆರಳುತ್ತಿರುವುದಾಗಿ ಮೌನಿ ಮಾತಾ ಪುತ್ರ ಹರೇ ರಾಮ್ ಅಗರ್ವಾಲ್ (55) ತಿಳಿಸಿದರು. ಮಹಂತ್ ನೃತ್ಯ ಗೋಪಾಲ್ ದಾಸ್ ಸೇವಾಕುಲ ತನ್ನ ತಾಯಿಯನ್ನು ಆಹ್ವಾನಿಸಿದ್ದಾರೆ. 1986 ರಲ್ಲಿ ನಮ್ಮ ತಂದೆ ದೇವಕಿನಂದನ್ ಅಗರ್ವಾಲ್ ಮೃತಪಟ್ಟ ಬಳಿಕ ನಮ್ಮ ತಾಯಿ ಸರಸ್ವತಿ ದೇವಿ ತನ್ನ ಜೀವನವನ್ನು ಶ್ರೀರಾಮನಿಗೆ ಅರ್ಪಿಸಿದರು ಎಂದು ಅವರು ತಿಳಿಸಿದ್ದಾರೆ.

    ಸರಸ್ವತಿ ದೇವಿ ಪ್ರಸ್ತುತ ಎರಡನೇ ಮಗ ನಂದ್ ಲಾಲ್ ಅಗರ್ವಾಲ್ ಜೊತೆ ಇದ್ದಾರೆ. ಆಕೆಯ ಸೊಸೆ ಇನ್ನು ಅಗರ್ವಾಲ್ ಮಾತನಾಡಿ, ಸರಸ್ವತಿ ದೇವಿಯು ಮುಂಜಾನೆ 4 ಗಂಟೆಗೆ ಏಳುತ್ತಾರೆ. ಆರು ಗಂಟೆ ಧ್ಯಾನ ಮಾಡುತ್ತಾರೆ. ಸಂಧ್ಯಾ ಆರತಿಯ ನಂತರ ರಾಮಾಯಣ ಮತ್ತು ಭಗವದ್ಗೀತೆಯಂತಹ ಪುಸ್ತಕಗಳನ್ನು ಓದುತ್ತಾರೆ. ದಿನಕ್ಕೆ ಒಂದು ಹೊತ್ತಿನ ಊಟವನ್ನು ಮಾತ್ರ ತಿನ್ನುತ್ತಾರೆ. ಬೆಳಳಗ್ಗೆ ಮತ್ತು ಸಂಜೆ ಒಂದು ಲೋಟ ಹಾಲು ಕುಡಿಯುತ್ತಾರೆ ಎಂದು ಹೇಳುತ್ತಾರೆ. ಅನ್ನ, ದಾಲ್ ಮತ್ತು ರೊಟ್ಟಿಗಳನ್ನು ಒಳಗೊಂಡಿರುವ ಸಸ್ಯಾಹಾರಿ ಆಹಾರವನ್ನು ತಿನ್ನುತ್ತಾರೆ ಎಂದು ಆಕೆ ವಿವರಿಸಿದ್ದಾರೆ.

    ಉತ್ತರ ಪ್ರದೇಶ: ಜ.22 ರಂದು ಮಾಂಸದ ಅಂಗಡಿಗಳನ್ನು ಮುಚ್ಚಲು ನಿರ್ಧಾರ, ಈ ಕಾರ್ಯಕ್ರಮವೂ ರದ್ದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts