More

    ಅಯೋಧ್ಯೆಯಲ್ಲಿ ಭಕ್ತರ ಹಣೆಗೆ ತಿಲಕವಿಟ್ಟು ಈ ಬಾಲಕ ಸಂಪಾದಿಸುವ ಹಣ ಸರ್ಕಾರಿ ನೌಕರನ ಸಂಬಳಕ್ಕಿಂತಲೂ ಹೆಚ್ಚು!

    ಅಯೋಧ್ಯೆ: ಇಡೀ ಜಗತ್ತು ಪ್ರಸ್ತುತ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಬದುಕುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ಈ ಜಗತ್ತಿನಲ್ಲಿ ಎಲ್ಲಿಯಾದರೂ ಏನಾದರೂ ವಿಚಿತ್ರ ಸಂಭವಿಸಿದ ತಕ್ಷಣ, ಆ ವಿಷಯ ಪ್ರಪಂಚದಾದ್ಯಂತ ಸಾಮಾಜಿಕ ಜಾಲತಾಣ ಮೂಲಕ ವೈರಲ್ ಆಗುತ್ತದೆ.

    ವೈರಲ್​ ವಿಡಿಯೋಗಳಿಂದಾಗಿ ಕೆಲವರು ರಾತ್ರೋರಾತ್ರಿ ಹೀರೋ ಆಗುತ್ತಾರೆ. ಈಗಾಗಲೇ ಹೈದರಾಬಾದ್​ನಲ್ಲಿ ಕುಮಾರಿ ಆಂಟಿ, ದೆಹಲಿಯಲ್ಲಿ ವಡಾ ಪಾವ್ ಹುಡುಗಿ, ನಾಗ್ಪುರದಲ್ಲಿ ಡಾಲಿ ಚಾಯ್ ಹೀಗೆ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದ ಮೂಲಕ ಕ್ರೇಜ್ ಗಳಿಸಿದ್ದಾರೆ. ಕೆಲವರು ಸೆಲೆಬ್ರಿಟಿಗಳ ಪಟ್ಟಿಗೆ ಸೇರುತ್ತಿದ್ದಾರೆ. ಇತ್ತೀಚೆಗೆ, ಈ ವರ್ಗಕ್ಕೆ ಸಂಬಂಧಿಸಿದ ಮತ್ತೊಂದು ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    ಗೋಲು ಹೆಸರಿನ ಬಾಲಕನಿಗೆ ಸಂಬಂಧಿಸಿದ ವಿಡಿಯೋ ಸದ್ಯ ನೆಟ್ಟಿಗರ ಗಮನ ಸೆಳೆಯುತ್ತಿದೆ. ಅಯೋಧ್ಯೆಯಲ್ಲಿ ವಾಸಿಸುವ ಗೋಲು ಎಂಬ ಹುಡುಗ ಭಾರತದ ಹೆಚ್ಚಿನ ವೃತ್ತಿಪರರಿಗಿಂತ ಅಧಿಕ ಸಂಪಾದನೆ ಮಾಡುತ್ತಿದ್ದಾನೆ. ಹಣ ಸಂಪಾದನೆ ಮಾಡುತ್ತಿರುವ ಈ ಹುಡುಗನ ಆತ್ಮವಿಶ್ವಾಸದ ಹಾದಿಯನ್ನು ನೀವು ನೋಡಲೇಬೇಕು. ವ್ಯಕ್ತಿಯೊಬ್ಬರು ತಮ್ಮ ಇನ್​ಸ್ಟಾಗ್ರಾಂ ಮೂಲಕ ಬಾಲಕನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಯೋಧ್ಯೆಯಲ್ಲಿ ಓಡಾಡುವಾಗ ಗೋಲುವನ್ನು ಕಂಡ ಆ ವ್ಯಕ್ತಿ ಆತನ ಬಳಿ ಬಂದು ಆತನ ಕೆಲಸ ಮತ್ತು ಆದಾಯದ ಬಗ್ಗೆ ಪ್ರಶ್ನಿಸಿದರು. ಈ ವೇಳೆ ಗೋಲು ನೀಡಿದ ಉತ್ತರ ನೆಟ್ಟಿಗರನ್ನು ಹುಬ್ಬೇರಿಸಿದೆ.

    ಬೆಳಗ್ಗೆ ಆರರಿಂದ ರಾತ್ರಿ 10ರವರೆಗೆ ಶ್ರೀಗಂಧದ ತಿಲಕ ಇಡುವ ಕೆಲಸ ಮಾಡುವ ಗೋಲು, ಪ್ರತಿ ದಿನ ಸುಮಾರು 1500 ರೂಪಾಯಿ ಸಂಪಾದನೆ ಮಾಡುತ್ತಾನೆ. ಅಲ್ಲಿಗೆ ಒಂದು ತಿಂಗಳಿಗೆ 45 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಾನೆ. ಇದನ್ನು ಕೇಳಿ ನೆಟ್ಟಿಗರೇ ಶಾಕ್​ ಆಗಿದ್ದಾರೆ. ಸರ್ಕಾರಿ ನೌಕರರ ವೇತನಕ್ಕೂ ಹೆಚ್ಚಿದೆ ಎನ್ನುತ್ತಿದ್ದಾರೆ. (ಏಜೆನ್ಸೀಸ್​)

    ನಟಿ ಸಮಂತಾ ಬೆತ್ತಲೆ ಫೋಟೋ ವೈರಲ್​! ಅಪ್ಪಟ್ಟ ಅಭಿಮಾನಿ ತೆರೆದಿಟ್ಟ ಅಸಲಿ ಸತ್ಯ ಇದು

    ಮಾಸ್​ ಸಿಕ್​ ಲೀವ್​ ಪಡೆದು ಮೊಬೈಲ್​ ಸ್ವಿಚ್​ ಆಫ್​! ಏರ್​ ಇಂಡಿಯಾದ 70ಕ್ಕೂ ಹೆಚ್ಚು ವಿಮಾನ ಹಾರಾಟ ರದ್ದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts