ಚಿತ್ರಮಂದಿರಕ್ಕೆ ಬರಲು ಸಜ್ಜಾದ ರಾಣಾ ದಗ್ಗುಬಾಟಿ; ಸಂಕ್ರಾಂತಿಗೆ ಅರಣ್ಯ ಬಿಡುಗಡೆ

thumb
Published on

ಹೈದರಾಬಾದ್​: 2018ರಲ್ಲಿಯೇ ಸೆಟ್ಟೇರಿ, 2019ರಲ್ಲಿ ಶೂಟಿಂಗ್​ ಮುಗಿಸಿಕೊಂಡಿದ್ದ ಅರಣ್ಯ ಸಿನಿಮಾ ತಂಡ ಇದೀಗ ಬಿಡುಗಡೆ ದಿನಾಂಕವನ್ನು ಘೋಷಿಸಿಕೊಂಡಿದೆ. ರಾಣಾ ದಗ್ಗುಬಾಟಿ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಚಿತ್ರದ ಪರಿಕಲ್ಪನೆ ಮತ್ತು ಪಾತ್ರವರ್ಗದಿಂದಲೇ ಕುತೂಹಲ ಮೂಡಿಸಿತ್ತು. ಇದೀಗ 2021ರ ಸಂಕ್ರಾಂತಿಗೆ ಬಿಡುಗಡೆ ಆಗುವುದು ಪಕ್ಕಾ ಆಗಿದೆ.

ಪ್ರಭು ಸೋಲೋಮನ್​ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ನೈಜ ಘಟನೆ ಆಧರಿಸಿ ಸಿದ್ಧವಾಗಿದೆ. ರಾಣಾ ಸಿನಿಮಾ ಕರಿಯರ್​ನಲ್ಲಿ ಈ ಹಿಂದೆಂದೂ ಕಾಣಿಸದ ರೀತಿಯಲ್ಲಿ ಅರಣ್ಯ ಸಿನಿಮಾದಲ್ಲಿ ಎದುರಾಗಿದ್ದಾರೆ. ಈಗಾಗಲೇ ಈ ಚಿತ್ರದ ಟೀಸರ್​ 5 ಮಿಲಿಯನ್​ಗೂ ಅಧಿಕ ಬಾರಿ ವೀಕ್ಷಣೆ ಆಗಿದ್ದು, ಡಿಸೆಂಬರ್​ ವೇಳೆಗೆ ಟ್ರೇಲರ್​ ಬಿಡುಗಡೆ ಆಗಲಿದೆ.

ಅಂದಹಾಗೆ, ಬಹುಭಾಷೆಯಲ್ಲಿ ಬಿಡುಗಡೆ ಆಗಲಿರುವ ಈ ಚಿತ್ರದಲ್ಲಿ ತಮಿಳಿನ ವಿಷ್ಣು ವಿಶಾಲ್​, ಹಿಂದಿ ನಟ ಪುಲ್ಕಿತ್​ ಸಾಮ್ರಾಟ್​, ಜೋಯಾ ಹುಸೇನ್​, ಶ್ರೇಯಾ ಸೇರಿ ಬಹುಭಾಷೆಯ ಕಲಾವಿದರು ನಟಿಸಿದ್ದಾರೆ. ಇರೋಸ್​ ಇಂಟರ್​ನ್ಯಾಷನಲ್​ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಶಾಂತನು ಮೊಯಿತ್ರಾ ಸಂಗೀತ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net