ಟಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿದ್ದ ರಾಣಾ ದಗ್ಗುಬಾಟಿ, ತಮ್ಮ ಗೆಳತಿ ಮಿಹಿಕಾ ಬಜಾಜ್ ಅವರನ್ನು ಶನಿವಾರ ಮದುವೆಯಾಗಿದ್ದಾರೆ. ರಾಣಾ ಮತ್ತು ಮಿಹಿಕಾ ಅವರ ಮದುವೆ ರಾಮಾನಾಯ್ಡು ಸ್ಟುಡಿಯೋದಲ್ಲಿ ಆಯೋಜಿತವಾಗಿತ್ತು. ಈ ಮದುವೆಗೆ ಆಯ್ದ ಕೆಲವರನ್ನು ಮಾತ್ರ ಆಹ್ವಾನಿಸಲಾಗಿತ್ತು. ನಾಗಾರ್ಜುನ, ವೆಂಕಟೇಶ್, ಸಮಂತಾ ಸೇರಿದಂತೆ ಟಾಲಿವುಡ್ನ ಹಲವು ಜನಪ್ರಿಯ ನಟ- ನಟಿಯರು ಮತ್ತು ರಾಣಾ ಅವರ ಸಂಬಂಧಿಕರು ಮದುವೆಯಲ್ಲಿ ಹಾಜರಿದ್ದರು. ಇಂಟೀರಿಯರ್ ಡಿಸೈನರ್ ಆಗಿರುವ ಮಿಹಿಕಾ ಬಜಾಜ್, ಹೈದರಾಬಾದ್ನಲ್ಲಿ ಸ್ವಂತ ಕಂಪನಿಯೊಂದನ್ನು ಸ್ಥಾಪಿಸಿದ್ದಾರೆ. ಹಲವು ವರ್ಷಗಳ ಸ್ನೇಹಿತರಾಗಿದ್ದ ರಾಣಾ ಮತ್ತು ಮಿಹಿಕಾ, ಮೇ ತಿಂಗಳಲ್ಲಿ ಮದುವೆಯಾಗುವುದಾಗಿ ಘೋಷಿಸಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಇಬ್ಬರ ನಿಶ್ಚಿತಾರ್ಥ ಸಹ ಆಗಿತ್ತು. ಶನಿವಾರ ಕುಟುಂಬದವರು ಮತ್ತು ಹಿತೈಷಿಗಳ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಆ ಮದುವೆಯ ಒಂದಷ್ಟು ಕ್ಷಣಗಳು ಇಲ್ಲಿವೆ..
ಫೋಟೋ ಕೃಪೆ: Reels Frames