ಕನ್ನಡ ನಿರ್ಮಾಪಕರ ಹಿಂದಿ ಸಿನಿಮಾ ... ದಿಲ್​ ಹೇ ಗ್ರೇನಲ್ಲಿ ಊರ್ವಶಿ ರೌತೇಲ

Urvashi Rautela (3)
Published on

ಬೆಂಗಳೂರು: 'ಪಡ್ಡೆಹುಲಿ', '100', "ಗಾಳಿಪಟ 2' ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ರಮೇಶ್​ ರೆಡ್ಡಿ, ಈಗ ಸದ್ದಿಲ್ಲದೆ ಹಿಂದಿಯಲ್ಲೊಂದು ಚಿತ್ರ ನಿರ್ಮಾಣ ಮಾಡಿದ್ದಾರೆ. "100' ಚಿತ್ರದ ಚಿತ್ರೀಕರಣದ ಸಂದರ್ಭದಲ್ಲೇ ಅವರು, ಆ ಚಿತ್ರವನ್ನು ಹಿಂದಿಯಲ್ಲಿ ರೀಮೇಕ್​ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈಗ ಅವರು "ದಿಲ್​ ಹೈ ಗ್ರೇ' ಎಂಬ ಚಿತ್ರವನ್ನು ನಿರ್ಮಿಸಿದ್ದು, ಊರ್ವಶಿ ರೌತೇಲ ನಾಯಕಿಯಾಗಿ ನಟಿಸಿದ್ದಾರೆ.

'ದಿಲ್​ ಹೈ ಗ್ರೇ' ಚಿತ್ರವು ಕನ್ನಡದ '100' ಚಿತ್ರದ ರೀಮೇಕ್​ ಆಗಿದ್ದು, ಈಗಾಗಲೇ ಚಿತ್ರೀಕರಣ ಸಂಪೂರ್ಣವಾಗಿದೆ. ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದ್ದು, ಜುಲೈನಲ್ಲಿ ಚಿತ್ರ ಬಿಡುಗಡೆಯಾಗಲಿದೆ. "100' ಚಿತ್ರವು ತಮಿಳಿನ 'ತಿರುಟ್ಟು ಪಯಲೆ 2'ನ ರೀಮೇಕ್​ ಆಗಿದ್ದು, ಮೂಲ ಚಿತ್ರವನ್ನು ನಿರ್ದೇಶಿಸದ್ದ ಸುಸಿ ಗಣೇಶನ್​ ಅವರೇ ಹಿಂದಿಯ ಅವತರಣಿಕೆಯನ್ನೂ ನಿರ್ದೇಶಿಸಿದ್ದಾರೆ.

ಈ ಚಿತ್ರವು ಮೂರು ಪಾತ್ರಗಳ ಸುತ್ತ ಸುತ್ತುತ್ತದೆ. ವಿನೀತ್​ ಪೊಲೀಸ್​ ಇನ್​ಸ್ಪೆಕ್ಟರ್​ ಆಗಿ ಕಾಣಿಸಿಕೊಂಡರೆ, ಅಕ್ಷಯ್​ ಆನ್​ಲೈನ್​ನಲ್ಲಿ ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುವ ವಿಲನ್​ ಆಗಿ ನಟಿಸಿದ್ದಾರೆ. ರಚಿತಾ ರಾಮ್​ ಮಾಡಿದ ಪಾತ್ರವನ್ನು ಹಿಂದಿಯಲ್ಲಿ ಊರ್ವಶಿ ಮಾಡಿದ್ದಾರೆ.

ಇಂದಿನ ಕಾಲಟ್ಟಕ್ಕೆ ಕಥೆ ಸೂಕ್ತವಾಗಿದೆ ಎನ್ನುವ ರಮೇಶ್​ ರೆಡ್ಡಿ, 'ಇಲ್ಲಿ ಕಥೆಯೇ ಹೀರೋ. ಅದೇ ಕಾರಣಕ್ಕೆ ಈ ಚಿತ್ರವನ್ನು ಬರೀ ಕನ್ನಡದಲ್ಲಷ್ಟೇ ಅಲ್ಲ, ಹಿಂದಿಯಲ್ಲೂ ನಮ್ಮ ಸೂರಜ್​ ಪ್ರೊಡಕ್ಷನ್ಸ್​ನಡಿ ನಿರ್ಮಾಣ ಮಾಡಿದ್ದೇನೆ' ಎನ್ನುತ್ತಾರೆ.

'ದಿಲ್​ ಹೈ ಗ್ರೇ' ಅಲ್ಲದೆ 'ಬ್ಲಾಕ್​ ರೋಸ್​' ಮತ್ತು ಹೆಸರಿಡದ ಇನ್ನೊಂದು ಚಿತ್ರದಲ್ಲೂ ಊರ್ವಶಿ ನಟಿಸುತ್ತಿದ್ದು, ಆ ಚಿತ್ರಗಳೂ ಇದೇ ವರ್ಷ ಬಿಡುಗಡೆಯಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net