ಬೆಳಗಾವಿ: ಸಿಡಿ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಪಾತ್ರ ನೇರವಾಗಿ ಇದೆ. ಸಿಬಿಐ ತನಿಖೆ ಮಾಡಿದರೆ ಎಲ್ಲ ದಾಖಲೆಗಳನ್ನು ಕೊಡುತ್ತೇನೆ. ಡಿಕೆಶಿ ಪಾತ್ರ ಇಲ್ಲವಾದಲ್ಲಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಬೆಂಗಳೂರಿನಲ್ಲಿ ತಮ್ಮ ನಿವಾಸಕ್ಕೆ ಅಶ್ಲೀಲ ಫೋಟೋ ಅಂಟಿಸಿದ ವಿಚಾರವಾಗಿ ಬೆಳಗಾವಿಯಲ್ಲಿಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಿನ್ನೆ ರಾತ್ರಿ ಸನ್ಮಾನ್ಯ ಡಿಕೆಶಿ, ಗೂಂಡಾಗಳನ್ನು ಕಳಸಿ ಮನೆಗೆ ಅಶ್ಲೀಲ ಫೋಟೋ ಹಚ್ಚಿದ್ದಾರೆ. ಅವರು ಕಾಂಗ್ರೆಸ್ ಕಾರ್ಯಕರ್ತರು ಅಲ್ಲ, ಅವರು ಡಿಕೆಶಿಯ ಗೂಂಡಾಗಳು. ಸಿಡಿ ಪ್ರಕರಣದಲ್ಲಿ ಅಪಮಾನ ಮಾಡಿದ. ಕೊತ್ವಾಲ ರಾಮಚಂದ್ರನ ಶಿಷ್ಯ ಇಂದು ಈ ರೀತಿ ಮಾಡಿದ್ದಾರೆ. ಗೋಕಾಕ್ನಲ್ಲಿ ಪ್ರಕರಣ ದಾಖಲು ಮಾಡಿದ್ದೇನೆ. ಪ್ರಕರಣವನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲು ಕಾನೂನು ಹೋರಾಟ ಮಾಡುತ್ತೇನೆ ಎಂದರು.
ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸಲು ಸಿಎಂ ಸಿದ್ದರಾಮಯ್ಯರನ್ನು ಒತ್ತಾಯಿಸಿದ್ದೇನೆ. ಪತ್ರದ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದೇನೆ. ಸದಾಶಿವ ನಗರದ ಪ್ರಕರಣವನ್ನು ಸಿಬಿಐ ವಹಿಸಬೇಕೆಂದು ಗೃಹ ಸಚಿವ ಹಾಗೂ ಡಿಐಜಿಗೆ ಪತ್ರ ಬರೆದಿದ್ದೇನೆ. ಸಿಡಿ ಪ್ರಕರಣದಲ್ಲಿ ನೇರವಾಗಿ ಡಿ.ಕೆ.ಶಿವಕುಮಾರ್ ಪಾತ್ರ ಇದೆ. ಇಲ್ಲವಾದಲ್ಲಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ರಮೇಶ ಜಾರಕಿಹೊಳಿಯನ್ನು ಮುಗಿಸಿದ್ದೇನೆ ಎಂದು ಹೇಳಿದ ಆಡಿಯೋ ಇದೆ. ಸಿಬಿಐ ತನಿಖೆ ಆದರೆ ಎಲ್ಲ ದಾಖಲೆಗಳನ್ನು ಕೊಡುತ್ತೇನೆ. ಡಿಕೆಶಿ ಸ್ಟೈಲ್ ಬೆದರಿಕೆ ಹಾಕುವುದು. ಡಿಕೆಶಿ ಬಹಳ ವೀಕ್ ಮನುಷ್ಯ. ಕೇವಲ ಅವನ ಕೆಲಸ ಬ್ಲಾಕ್ಮೇಲ್ ಮಾಡುವುದು ಎಂದು ಜಾರಕಿಹೊಳಿ ಹೇಳಿದರು.
ರಾಜ್ಯದಲ್ಲಿ ಆಪರೇಷನ್ ಕಮಲ ಸಾಧ್ಯತೆವೇ ಇಲ್ಲ. ಆದರೆ, ಮಹಾರಾಷ್ಟ್ರ ಮಾದರಿಯಲ್ಲಿ ಆಗಬೇಕು. ಡಿಕೆಶಿ ಮತ್ತು ಸಿದ್ದರಾಮಯ್ಯ ಇಲ್ಲವೆ ಮತ್ತೆ ಯಾರಾದರೂ ಬಂಡಾಯ ಏಳಬೇಕು. ಒಂದು ತಂಡ ರಚನೆಯಾಗಿ ಹೊರ ಬಂದರೆ ಮಾತ್ರ ಸರ್ಕಾರ ಬೀಳಲಿದೆ. ನನ್ನ ಮೇಲೆ ಕೇಸ್ ದಾಖಲಾದ್ರೆ ನಾನು ನಾನು ಹೋರಾಟ ಮಾಡುತ್ತೇನೆ. ನಾನು ಯಾವುದೇ ಕಾರಣಕ್ಕೂ ಹೆದರಲ್ಲ ಎಂದರು.
ದೀಪಿಕಾ ‘ಮುಕ್ತ ಸಂಬಂಧ’ ಹೇಳಿಕೆ ಟೀಕಿಸಿದ ನೆಟ್ಟಿಗರು: ಸುಪ್ರಿಯಾ ಶ್ರಿನಾತೆ ಅಸಮಾದಾನ
2021ರಲ್ಲಿ ಐಫೋನ್ನ ಮಹತ್ವದ ಬದಲಾವಣೆಗೆ ಕಾರಣವೇ ಪೆಗಾಸಸ್ ಸ್ಪೈವೇರ್! ಪೆಗಾಸಸ್ ಅಂದ್ರೆ ವಿಶ್ವವೇ ಬೆದರುವುದೇಕೆ?
ವಿಧಾನಸಭೆ ಚುನಾವಣೆ; ತೆಲಂಗಾಣದಲ್ಲಿ ಪ್ರಥಮ ಬಾರಿಗೆ ತೃತೀಯಲಿಂಗಿಗೆ ಎಂಎಲ್ಎ ಟಿಕೆಟ್