More

  ರಮೇಶ್​ ಜಾರಕಿಹೊಳಿ ರಾಸಲೀಲೆ ವಿಡಿಯೋ ವೈರಲ್: ಕೆಲಸ ಕೇಳಿಕೊಂಡು ಬಂದವಳ ಜತೆ ಸಲ್ಲಾಪ

  ಬೆಂಗಳೂರು: ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರ ರಾಸಲೀಲೆಯ ದೃಶ್ಯ ವೈರಲ್​ ಆಗಿದ್ದು, ತನಿಖೆ ನಡೆಸುವಂತೆ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಬೆಂಗಳೂರು ಪೊಲೀಸ್​ ಕಮೀಷನರ್​ಗೆ ದೂರು ನೀಡಿದ್ದಾರೆ.

  ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಕಲ್ಲಹಳ್ಳಿ, ಕೆಲ ತಿಂಗಳ ಹಿಂದೆ ರಮೇಶ್​ ಜಾರಕಿಹೊಳಿಯಿಂದ ನಡೆದಿರುವ ಘಟನೆಯಿದು. ಇಂತಹ ವಿಚಾರಗಳಲ್ಲಿ ಸಂತ್ರಸ್ತೆಯ ದೂರು ಮುಖ್ಯವಾಗಲಿದೆ. ಆದರೆ ಆಕೆಗೆ ಜೀವಭಯವಿದೆ. ನನ್ನನ್ನು ಸಂತ್ರಸ್ತೆ ಕುಟುಂಬಸ್ಥರು ಸಂಪರ್ಕಿಸಿ ನೋವನ್ನ ಹೇಳಿಕೊಂಡ ಕಾರಣದಿಂದ ಆಕೆಯ ಪರವಾಗಿ ದೂರು ನೀಡಲು ನಾನು ಬಂದಿದ್ದೇನೆ. ದೂರಿನ ನಂತರ ವಿಚಾರ ಬಯಲಾಗಲಿದೆ. ಗೌಪ್ಯತೆಯ ಕಾರಣದಿಂದ ಸಂತ್ರಸ್ತ ಮಹಿಳೆಯನ್ನ ಕರೆತಂದಿಲ್ಲ. ಸಚಿವ ಲೈಂಗಿಕ ಕಿರುಕುಳದ ಬಗ್ಗೆ ಸಂತ್ರಸ್ತೆ ಬಳಿ ವಿಡಿಯೋ ಇದೆ. ಇದು ಗೊತ್ತಾಗುತ್ತಿದ್ದಂತೆ ಆಕೆಗೆ ಜೀವ ಭಯ ಹಾಕಲಾಗಿದೆ ಎಂದರು.

  ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದಿನ ಸಚಿವ ಎಚ್​.ವೈ.ಮೇಟಿ ಇಂಹತ ಪ್ರಕರಣದಲ್ಲಿ ಸಿಕ್ಕಿಬಿದ್ದು ರಾಜೀನಾಮೆ ನೀಡಿದ್ದರು. ಇದೀಗ ಬಿಜೆಪಿ ಸರ್ಕಾರದ ಸಚಿವರಾಗಿರುವ ರಮೇಶ್​ ಜಾರಕಿಹೊಳಿ ಅವರದ್ದು ಎನ್ನಲಾದ ವಿಡಿಯೋ ವೈರಲ್​ ಆಗಿದೆ. ಈ ಪ್ರಕರಣ ಪಕ್ಷಕ್ಕೂ ಮುಜುಗರ ತರಿಸಿದ್ದು, ಬಿಜೆಪಿಯಲ್ಲೂ ರಮೇಶ್ ಜಾರಕಿಹೊಳಿ ರಾಜೀನಾಮೆಗೂ ಒತ್ತಡ ಬಂದಿದೆ. ಈ ಸರ್ಕಾರ ಬರಲು ರಮೇಶ್​ ಜಾರಕಿಹೊಳಿ ಅವರ ಕೊಡುಗೆ ದೊಡ್ಡದ್ದು. ಈಗ ರಾಜೀನಾಮೆ ಪಡೆಯುವ ವಿಚಾರದಲ್ಲಿ ಸಿಎಂ ಒತ್ತಡದಲ್ಲಿ ಇದ್ದಾರೆ ಎಂದು ಮೂಲಗಳು ತಿಳಿಸಿವೆ.

  ಕರ್ನಾಟಕ ಭವನದಲ್ಲೇ ಸಚಿವರ ಕಾಮದಾಟ! ರಮೇಶ್​ ಜಾರಕಿಹೊಳಿಗೆ ಖೆಡ್ಡಾ ತೋಡಿದ್ದು ಕೈ ಮುಖಂಡ?

  ಮನೆಯಲ್ಲೇ ಕೋವಿಡ್​ ವ್ಯಾಕ್ಸಿನ್ ಪಡೆಯಲು ಅವಕಾಶವಿಲ್ಲ: ಸಚಿವ ಡಾ.ಸುಧಾಕರ್

  ಜೀವಂತ ಯುವಕನನ್ನೇ ಪೋಸ್ಟ್ ಮಾರ್ಟಂಗೆ ಕರೆದೊಯ್ದ ಆಸ್ಪತ್ರೆ ಸಿಬ್ಬಂದಿ! ಮುಂದೇನಾಯ್ತು?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts