

ಹೈದರಾಬಾದ್: ಎಸ್.ಎಸ್. ರಾಜಮೌಳಿ ನಿರ್ದೇಶನದ 'RRR' ಚಿತ್ರ ಬರೀ ಭಾರತದಲ್ಲಷ್ಟೇ ಅಲ್ಲ, ಜಾಗತಿಕವಾಗಿಯೂ ಸೂಪರ್ ಹಿಟ್ ಆಗಿದೆ. ಈ ಚಿತ್ರದ ನಂತರ ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ಚರಣ್ ತೇಜ ಹಾಲಿವುಡ್ನಲ್ಲೂ ಬೇಡಿಕೆ ಹೆಚ್ಚಾಗಿದೆ. ಈ ಪೈಕಿ ರಾಮ್ಚರಣ್ ತೇಜ, ಹಾಲಿವುಡ್ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿರುವ ಸುದ್ದಿಯೊಂದು ಹೊರಬಿದ್ದಿದೆ.
ಇತ್ತೀಚೆಗೆ ಸಿನಿಮಾ ವಿಮರ್ಶಕ ಸ್ಯಾಮ್ ಫ್ರಾಗೋಸೋ ಅವರ 'ಟಾಕ್ ಈಸಿ' ಎಂಬ ಪಾಡ್ಕಾಸ್ಟ್ಗೆ ಸಂದರ್ಶನ ನೀಡಿರುವ ರಾಮ್ಚರಣ್ ತೇಜ, ಹಾಲಿವುಡ್ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, 'ಒಬ್ಬ ನಟನಾಗಿ ಯಾವುದೇ ದೇಶದಲ್ಲಿ ಕೆಲಸ ಸಿಕ್ಕರೂ ಮಾಡುವುದಕ್ಕೆ ಸಿದ್ಧ. ಸದ್ಯ ಹಾಲಿವುಡ್ ಚಿತ್ರದಲ್ಲಿ ನಟಿಸುವ ಮಾತುಕಥೆ ನಡೆಯುತ್ತಿದ್ದು, ಚಿತ್ರ ಅಧಿಕೃತವಾಗಿ ಘೋಷಣೆಯಾದಾಗಲಷ್ಟೇ ಆ ಬಗ್ಗೆ ಮಾತನಾಡುವುದಕ್ಕೆ ಸಾಧ್ಯ. ಮುಂದಿನ ಕೆಲವು ತಿಂಗಳಲ್ಲಿ ಸುದ್ದಿ ಅಧಿಕೃತವಾಗಿ ಹೊರಬೀಳಲಿದೆ' ಎಂದು ರಾಮ್ಚರಣ್ ಹೇಳಿಕೊಂಡಿದ್ದಾರೆ.
ಹಾಲಿವುಡ್ನಲ್ಲಿ ಜೂಲಿಯಾ ರಾಬರ್ಟ್ಸ್, ಟಾಮ್ ಕ್ರೂಸ್ ಮತ್ತು ಬ್ರಾಡ್ ಪಿಟ್ ಜತೆಗೆ ನಟಿಸುವ ಇಂಗಿತವನ್ನು ವ್ಯಕ್ತಪಡಿಸಿರುವ ರಾಮ್ಚರಣ್, ಅವರ ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೂ ಸಿದ್ಧ ಎಂದು ಹೇಳಿದ್ದಾರೆ.
ಸದ್ಯ ಶಂಕರ್ ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ರಾಮ್ಚರಣ್ ನಟಿಸುತ್ತಿದ್ದು, ಈ ಚಿತ್ರ ಮುಂದಿನ ಸಂಕ್ರಾಂತಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.