ಧ್ರುವ ಸರ್ಜಾ ಮಗಳು ಹೇಗಿದ್ದಾಳೆ ಗೊತ್ತಾ?: ಮೊದಲ ಬಾರಿಗೆ ಫೋಟೋ ಹಂಚಿಕೊಂಡ ನಟ

Dhruva Sarja
Published on

ಬೆಂಗಳೂರು: ನಟ- ನಟಿಯರ ಮಕ್ಕಳು ಎಂದರೆ ಅಭಿಮಾನಿಗಳಿಗೆ ಸಖತ್​ ಕ್ರೇಜ್​ ಇರುತ್ತದೆ. ಕಲಾವಿದರಿಗೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ಅವರ ಮಕ್ಕಳಿಗೂ ಫ್ಯಾನ್ಸ್​​ ನೀಡುತ್ತಾರೆ. ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಅವರು ಮುದ್ದು ಮಗಳ ಫೋಟೋವನ್ನ ಮೊದಲ ಬಾರಿಗೆ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮುದ್ದು ಮಗಳ ಆಗಮನದಿಂದ ಖುಷಿಯಲ್ಲಿರುವ ಧ್ರುವ, ಮಗಳು ಜನಿಸಿ 6 ತಿಂಗಳ ಬಳಿಕ ಇದೀಗ ಮಗಳ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ. ಮಗಳ ಕೈಗೆ ಮುತ್ತು ಕೊಡುತ್ತಿರುವ ಫೋಟೋ ಶೇರ್ ಮಾಡಿ ನನ್ನ ಮಗಳು, ಲವ್ ಯೂ ಮಗಳೇ ಎಂದು ಧ್ರುವ ಸರ್ಜಾ ಬರೆದುಕೊಂಡಿದ್ದಾರೆ.

ಈ ಫೋಟೋ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿದ್ದಾರೆ. ಬೇಗ ಮಗಳ ಮುಖ ಫೋಟೋ ಶೇರ್ ಮಾಡಿ ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net