

ರಮಾನಂದ ಸಾಗರ್ ನಿರ್ದೇಶನದ ರಾಮಾಯಣ 1987ರಲ್ಲಿ ಕಿರುತೆರೆಯಲ್ಲಿ ಬಿತ್ತರವಾಗಿತ್ತು. ಆವತ್ತಿನ ದಿನಗಳಲ್ಲೇ ದಾಖಲೆ ಮಟ್ಟದಲ್ಲಿಯೇ ಧಾರಾವಾಹಿ ವೀಕ್ಷಣೆಗೆ ಒಳಪಟ್ಟಿತ್ತು. ಹೀಗಿರುವಾಗ ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಮೂರು ದಶಕಕ್ಕೂ ಹಿಂದಿನ ರಾಮಾಯಣ ಮರು ಪ್ರಸಾರ ಆರಂಭಿಸಿತ್ತು. ಈಗ ಆ ಧಾರಾವಾಹಿಗೆ ಈಗ ದಾಖಲೆಯ ಟಿವಿ ರೇಟಿಂಗ್ ಸಿಕ್ಕಿದೆ. ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಮಾಹಿತಿ ಹೊರಹಾಕಿದ್ದು, 2015ರಿಂದ ಇಲ್ಲಿಯವರೆಗೂ ದೂರದರ್ಶನದಲ್ಲಿ ಹಿಂದಿ ಮನರಂಜನಾ ವಾಹಿನಿ ವಿಭಾಗದಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಪಟ್ಟ ಧಾರಾವಾಹಿ ಎಂಬ ಪಟ್ಟ ರಾಮಾಯಣಕ್ಕೆ ಸಿಕ್ಕಿದೆ.
ನಿತ್ಯ ಬೆಳಗ್ಗೆ 9 ಮತ್ತು ರಾತ್ರಿ 9ಕ್ಕೆ ಡಿಡಿ ನ್ಯಾಶನಲ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಯಣ, ಶನಿವಾರ ಬೆಳಗ್ಗೆ 3.4 ಕೋಟಿ ಜನರಿಂದ ವೀಕ್ಷಣೆ ಆದರೆ, ಭಾನುವಾರ 5.2 ಕೋಟಿ ಜನ ನೋಡಿದ್ದಾರೆ. ಒಟ್ಟು ಎರಡು ದಿನದ ಅವಧಿಯಲ್ಲಿ ನಾಲ್ಕು ಏಪಿಸೋಡ್ಗಳನ್ನು ಒಟ್ಟಾರೆಯಾಗಿ 17 ಕೋಟಿ ಸಲ ವೀಕ್ಷಣೆ ಒಳಪಟ್ಟಿದೆ.
ರಾಮಾಯಣದ ಜತೆಗೆ ಮಹಾಭಾರತ, ಶಕ್ತಿಮಾನ್, ಶ್ರೀಮಾನ್ ಶ್ರೀಮತಿ, ಚಾಣಾಕ್ಷ, ದೇಖ್ ಬೈ ದೇಖ್, ಸರ್ಕಸ್, ಭ್ಯೂಮಕೇಶ್ ಭಕ್ಷಿ ಧಾರಾವಾಹಿಗಳು ಡಿಡಿ ನ್ಯಾಶನಲ್ನಲ್ಲಿ ಮರುಪ್ರಸಾರವಾಗುತ್ತಿವೆ. ಅಲಿಪ್ ಲೈಲಾ, ಮಹಾಭಾರತ, ಉನಿಷದ್ ಗಂಗಾ ಧಾರಾವಾಹಿಗಳು ಡಿಡಿ ಭಾರತಿಯಲ್ಲಿ ಪ್ರಸಾರ ಆರಂಭಿಸಿವೆ. (ಏಜೆನ್ಸೀಸ್)