ರಾಮನಗರ ಜಿಲ್ಲೆ ಮರುನಾಮಕರಣ; ರಾಜ್ಯ ಸರ್ಕಾರಕ್ಕೆ ತೀರ್ಮಾನಿಸುವ ಅಧಿಕಾರವಿದೆ: CM ಸಿದ್ದರಾಮಯ್ಯ

dk - 2025-05-23T163537.536
Published on

ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಮುಖ್ಯಮಂತ್ರಿ(CM) ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಮೂಲಕ ಜಿಲ್ಲೆಯ ಇತಿಹಾಸವನ್ನು ತಿರುಚಲಾಗುತ್ತಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಯವರು ಟೀಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅಲ್ಲಿನ ಜನರ ಜನಾಭಿಪ್ರಾಯವನ್ನು ಪಡೆದೇ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಕುಮಾರಸ್ವಾಮಿಯವರು ರಾಮನಗರ ಜಿಲ್ಲೆ ಸೃಜಿಸುವಾಗ, ಅಲ್ಲಿನ ಇತಿಹಾಸದ ಬಗ್ಗೆ ಯೋಚಿಸಿರಲಿಲ್ಲವೇ ಎಂದು ಮರುಪ್ರಶ್ನಿಸಿದರು.

ED, IT ದಾಳಿ ರಾಜಕೀಯ ಪ್ರೇರಿತವಾಗಬಾರದು

ಜಾರಿನಿರ್ದೇಶನಾಲಯ ತನ್ನ ಎಲ್ಲೆಯನ್ನು ಮೀರುತ್ತಿರುವ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಗಮನಿಸಿರುವ ಕುರಿತು ಪತ್ರರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಇ.ಡಿ ಯವರು, ಐ.ಟಿ.ಯವರು ತನಿಖೆ ಮಾಡುವುದನ್ನೇ ಆಗಲಿ ಅಥವಾ ಕಪ್ಪು ಹಣ ವ್ಯವಹಾರವನ್ನು ಪತ್ತೆ ಹಚ್ಚುವುದನ್ನೇ ಆಗಲಿ ಆಕ್ಷೇಪಿಸುವುದಿಲ್ಲ. ಆದರೆ ಇ.ಡಿ ಮತ್ತು ಐ.ಟಿ ದಾಳಿಗಳು ರಾಜಕೀಯ ದುರುದ್ದೇಶದಿಂದ ನಡೆಯಕೂಡದು. ಪ್ರಸ್ತುತ ಗೃಹ ಸಚಿವ ಜಿ.ಪರಮೇಶ್ವರ ಅವರ ಶಿಕ್ಷಣ ಸಂಸ್ಥೇಯ ಮೇಲೆ ಇ.ಡಿ.ದಾಳಿ ರಾಜಕೀಯ ಪ್ರೇರಿತ. ಸುಪ್ರೀಂ ಕೋರ್ಟ್ ನವರು ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ರೀತಿ ಅವಲೋಕಿಸಿದ್ದಾರೆ ಎಂದು ತೀರ್ಪು ಪರಿಶೀಲಿಸಿದ ನಂತರವಷ್ಟೇ ತಿಳಿಯಲಿದೆ ಎಂದರು.

ದೇಣಿಗೆ ನೀಡುವುದು ತಪ್ಪಲ್ಲ

ಯಂಗ್ ಇಂಡಿಯಾ ಸಂಸ್ಥೆಗೆ ದೇಣಿಗೆ ನೀಡಿರುವ ಬಗ್ಗೆ ಡಿಸಿಎಂ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ರವರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗಿರುವ ಬಗ್ಗೆ ಮಾತನಾಡಿ, ಯಾವುದೇ ಸಂಸ್ಥೆಗೆ ದೇಣಿಗೆ ನೀಡುವುದು ತಪ್ಪಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net