ಸಂಚಾರಿ ನಿಯಮ ಪಾಲಿಸುವಂತೆ ಮನವಿ; ಗಮನ ಸೆಳೆದ ರಾಮನಗರ ಜಿಲ್ಲಾ ಪೊಲೀಸರ ವಿಭಿನ್ನ ಪ್ರಯತ್ನ

Police
Published on

ಬೆಂಗಳೂರು: ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಹನ ಚಾಲಕರಿಗೆ ಕರಪತ್ರಗಳನ್ನು ನೀಡುವ ಮುಖೇನ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಮನಗರ ಪೊಲೀಸರು ಮನವಿ ಮಾಡಿದ್ದಾರೆ.

ಪೊಲೀಸರು ರಾಮನಗರ ತಲುಪುವ ಪ್ರತಿಯೊಬ್ಬ ವಾಹನ ಸವಾರರಿಗೆ ರಸ್ತೆಯ ಸುರಕ್ಷತಾ ಕ್ರಮಗಳನ್ನು ಒಳಗೊಂಡ ಕರಪತ್ರಗಳನ್ನು ಹಂಚುವ ಮುಖೇನ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಕರಪತ್ರಗಳಲ್ಲಿ ರಾಮನಗರ ಪೊಲೀಸರು ತಿಳಿಸಿರುವ ಸಂಚಾರಿ ನಿಯಮಗಳು ಈ ಕೆಳಕಂಡಂತಿವೆ.

ವಾಹನ ಸವಾರರು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು

  • ದ್ವಿಚಕ್ರ ವಾಹನ ಸವಾರರು ಐ.ಎಸ್.ಐ. ಪ್ರಮಾಣೀಕೃತ ಹೆಲೆಟ್‌ಗಳನ್ನು ಧರಿಸಿ.
  • ನಿಧಾನವೇ ಪ್ರಧಾನ, ಅತೀವೇಗ ಅಪಾಯಕಾರಿ.
  • ಪಥ ಶಿಸ್ತು ಪಾಲಿಸಿ, ವಾಹನ ಚಾಲನೆ ಮಾಡಿ 4. ಕುಡಿದು ವಾಹನ ಚಾಲನೆ ಮಾಡಬೇಡಿ.
  • ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಬೇಡಿ.
  • ಎಡಬದಿಯಿಂದ ಓವರ್‌ ಟೇಕ್‌ ಮಾಡಬೇಡಿ.
  • ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಬೇಡಿ ಪಾದಚಾರಿಗಳಿಗೆ ಆದ್ಯತೆ ನೀಡಿ.
  • ಸೀಟ್‌ ಬೆಲ್ಟ್ ಧರಿಸಿ, ಸುರಕ್ಷಿತವಾಗಿರಿ.
  • ಮುಂದಿನ ವಾಹನದಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net