ಕರೊನಾ ಸೋಂಕಿಗೆ ಆಯುರ್ವೇದದಲ್ಲಿ ರಾಮಬಾಣ: ವಿಜಯವಾಣಿ ಅಂಕಣಕಾರ ಡಾ.ಗಿರಿಧರ ಕಜೆ ಪ್ರತಿಪಾದನೆ

kaje giridar
Published on

ಬೆಂಗಳೂರು:ಆಯುರ್ವೇದ ಔಷಧ ನೀಡಿ ಕರೊನಾ ಸೋಂಕು ಗುಣಪಡಿಸುವ ಕುರಿತು ಆಯುರ್ವೆದ ತಜ್ಞ ಡಾ. ಗಿರಿಧರ ಕಜೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರನ್ನು ಗುರುವಾರ ಭೇಟಿ ಮಾಡಿ ವರದಿ ನೀಡಿ ಕೋವಿಡ್-19 ಔಷಧೋಪ

ಚಾರದ ಬಗ್ಗೆ ವಿವರಿಸಿ ದರು. ಕರೊನಾ ಗುಣಪಡಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 23 ವರ್ಷಗಳಿಂದ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದು, 2 ಲಕ್ಷಕ್ಕೂ ಅಧಿಕ ರೋಗಿಗಳನ್ನು ಗುಣಪಡಿಸಿದ ಅನುಭವ ಇದೆ. ಡೆಂಘ, ಚಿಕೂನ್ ಗುನ್ಯಾ, ಎಚ್1ಎನ್1, ಹೆಪಟೈಟಿಸ್ ಬಿ ಸೇರಿ ಅನೇಕ ವೈರಲ್ ರೋಗಗಳಿಗೆ ಆಯುರ್ವೇದ ಔಷಧದಿಂದ ರೋಗಿಗಳನ್ನು ಗುಣಪಡಿಸಿರುವುದನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಸಾಂಕ್ರಾಮಿಕ ರೋಗಗಳ ನಿರ್ವಹಣೆ ಕುರಿತಾಗಿ ಆಯುರ್ವೇದ ಹಲವಾರು ಉಲ್ಲೇಖಗಳಿವೆ. ಆಯುರ್ವೇದ ಪದ್ಧತಿಯ ಆಧಾರದಲ್ಲಿ ಸಂಶೋಧಿಸಿರುವ ‘ಭೌಮ್ಯ’ ಹಾಗೂ ಸಾತ್ಮ್ಯ’ ಎಂಬ ಔಷಧಗಳು ‘ಕೋವಿಡ್-19’ ಗುಣಪಡಿಸಲು ಶಕ್ತವಾಗಿವೆ. ವೈರಾಣುನಾಶಕ ಗುಣಮಾತ್ರ ಹೊಂದಿರದೆ ಜ್ವರ, ಸೀನು, ಉಸಿರಾಟದ ತೊಂದರೆ ಗುಣಪಡಿಸುತ್ತವೆ. ಯಕೃತ್​ಗೆ ಬಲ ನೀಡಿ ರೋಗನಿರೋಧಕ ಶಕ್ತಿ ಯನ್ನು ಹೆಚ್ಚಿಸುತ್ತವೆ ಎಂಬುದಕ್ಕೆ ಸಾಕ್ಷಿಯಾಗಿ 32 ಸಂಶೋಧನೆಗಳ 239 ಪುಟಗಳ ದಾಖಲೆಗಳನ್ನೂ ನೀಡಿದ್ದಾರೆ.

ಅಧ್ಯಯನಕ್ಕೆ ನೀಡಲು ಸಿದ್ಧ: ಕ್ಲಿನಿಕಲ್ ಅಧ್ಯಯನಕ್ಕೆ ಔಷಧವನ್ನು ಉಚಿತವಾಗಿ ಕೊಡಲು ಸಿದ್ಧ. ಭಾರತದಲ್ಲಿ 5 ಸಾವಿರಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ರೋಗಿಗಳಿಗೂ ಉಚಿತವಾಗಿ ಔಷಧ ನೀಡುತ್ತೇನೆ. ಸಂಶೋಧಿಸಿರುವ ‘ಭೌಮ್ಯ’ ಹಾಗೂ ’ಸಾತ್ಮ್ಯ’ ಮಾತ್ರೆಗಳ ಫಾರ್ಮುಲಾ ಮತ್ತು ಸಂಪೂರ್ಣ ಸ್ವಾಮ್ಯವನ್ನು ಕೋವಿಡ್ ವಿರುದ್ಧ ಹೋರಾಡಲು ರಾಜ್ಯ ಅಥವಾ ಕೇಂದ್ರ ಸರ್ಕಾರಕ್ಕೆ ಉಚಿತವಾಗಿ ನೀಡಲು ಬದ್ಧ ಎಂದು ಡಾ. ಕಜೆ ತಿಳಿಸಿದ್ದಾರೆ.

ಔಷಧಗಳ ಪ್ರಯೋಜನ

ಕೋವಿಡ್-19 ರೋಗಿಗಳನ್ನು ಗುಣಮುಖ ವಾಗಿಸಬಲ್ಲದು. ಔಷಧೋಪಚಾರದ ಸಮಯ ಕಡಿತ. ತೀವ್ರ ಅಸ್ವಸ್ಥತೆ ತಡೆ.  ಮರಣ ಪ್ರಮಾಣ ತಗ್ಗಿಸಬಹುದು. ಅಡ್ಡಪರಿಣಾಮ ಇರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net