ರಾಮ್​ ರಾಮ್​..! ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದ ಎಂದ ಸಚಿನ್​ ಪೈಲಟ್​

Sachin Thansk
Published on

ಜೈಪುರ: ತಮ್ಮನ್ನು ಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಹುದ್ದೆಯಿಂದ ಉಚ್ಚಾಟನೆ ಮಾಡಿದ ನಂತರ ಒಂದೇ ಸಾಲಿನ ಟ್ವೀಟ್​ ಮೂಲಕ ಸತ್ಯವನ್ನು ಸೋಲಿಸಲು ಸಾಧ್ಯವಿಲ್ಲ ಎಂದಿದ್ದ ಸಚಿನ್​ ಪೈಲಟ್​ ಇದೀಗ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ಪೋಸ್ಟ್​ ಹಾಕಿದ್ದಾರೆ.

ಪಕ್ಷದ ನಂತರ ಅಸಮಾಧಾನಗೊಂಡು ಹೊರಹೋದ ಬಳಿಕ ತಮಗೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಇವತ್ತು ನನಗೆ ಬೆಂಬಲ ನೀಡಿದ ಎಲ್ಲರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ರಾಮ್​ ರಾಮ್​ ಸಾ ಎಂದು ಸೋಷಿಯಲ್​ ಮೀಡಿಯಾಗಳಲ್ಲಿ ಪೋಸ್ಟ್​ ಹಾಕಿದ್ದಾರೆ. ಇಲ್ಲಿ ರಾಮ್​ ರಾಮ್​ ಸಾ ಎಂಬುದು ರಾಜಸ್ಥಾನಿಯರು ಬಳಸುವ ಗೌರವ ಸೂಚಕ ಪದ.

ಕಾಂಗ್ರೆಸ್​ ಅಧ್ಯಕ್ಷನ ಸ್ಥಾನಕ್ಕೆ ಈಗಾಗಲೇ ಬೇರೆ ನೇಮಕವಾಗಿದೆ. ಇನ್ನು ಡಿಸಿಎಂ ಹುದ್ದೆ ಬಾಕಿ ಉಳಿದಿದ್ದು, ಅದಕ್ಕೂ ಕೂಡ ಜು.16ರೊಳಗೆ ಬೇರೆ ನೇಮಕವಾಗಲಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net