ನಾಳೆ ಮೂಡುಬಿದಿರೆಗೆ ರಾಮನವಮಿ ರಥಯಾತ್ರೆ

Published on

ಮೂಡುಬಿದಿರೆ: ಕೇರಳದ ಮಲ್ಲಪುರಂ ಜಿಲ್ಲೆಯ ಚೆರುಕೋಡ್ ಆಂಜನೇಯ ಆಶ್ರಮದ ವಾರ್ಷಿಕ ಮಹೋತ್ಸವ ಅಂಗವಾಗಿ ಶ್ರೀರಾಮ ನವಮಿ ರಥಯಾತ್ರೆ ಮಾ.29ರಂದು ಮೂಡುಬಿದಿರೆಗೆ ಆಗಮಿಸಲಿದೆ ಎಂದು ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜೈನಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಸಂಜೆ 6 ಗಂಟೆಗೆ ಅಲಂಗಾರು ಕಟ್ಟೆ ಬಳಿ ರಥವನ್ನು ಸಾರ್ವಜನಿಕವಾಗಿ ಸ್ವಾಗತಿಸಲಾಗುವುದು. ಬಳಿಕ ರಥ ಮುಖ್ಯ ರಸ್ತೆಯಲ್ಲಿ ಶೋಭಾಯಾತ್ರೆಯೊಂದಿಗೆ ಜೈನಮಠಕ್ಕೆ ಆಗಮಿಸಲಿದೆ. ಸ್ವರಾಜ್ಯ ಮೈದಾನದಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ನಡೆಯುವ ಶನೈಶ್ವರ ಪೂಜಾ ಸ್ಥಳಕ್ಕೆ ರಥವನ್ನು ಬರಮಾಡಿಕೊಳ್ಳಲಾಗುವುದು ಎಂದರು.

ಶ್ರೀರಾಮನ ಆದರ್ಶ, ಧರ್ಮ ಸಂದೇಶ ಎಲ್ಲ ಕಡೆ ಪಸರಿಸಬೇಕೆಂಬ ಸದುದ್ದೇಶದಿಂದ ಕೇರಳದ ಚೆರುಕೋಡ್ ಆಂಜನೇಯ ಆಶ್ರಮದಿಂದ ಹೊರಡುವ ಈ ರಥಯಾತ್ರೆಯನ್ನು ಮೂಡುಬಿದಿರೆ ಜನತೆಯ ಅಪೇಕ್ಷೆ ಮೇರೆಗೆ ಇಲ್ಲಿಗೆ ಬರಮಾಡಿಕೊಳ್ಳಲಾಗುತ್ತಿದೆ ಎಂದರು.

ಶ್ರೀರಾಮ ನವಮಿ ರಥಯಾತ್ರಾ ಸಮಿತಿ ಮೂಡುಬಿದಿರೆ ಸಂಚಾಲಕ ಎಂ.ಬಾಹುಬಲಿ ಪ್ರಸಾದ್, ಕಾರ್ಯದರ್ಶಿ ಶಾಂತಾರಾಮ ಕುಡ್ವ, ಉಪಾಧ್ಯಕ್ಷ ದಯಾನಂದ ಪೈ, ಜತೆ ಕಾರ್ಯದರ್ಶಿ ಶಿವ ಭಂಡಾರ್ಕರ್, ಕೋಶಾಧಿಕಾರಿ ರಾವೇಂದ್ರ ಭಂಡಾರ್ಕರ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net