ಕಾಸರಗೋಡು: ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಂಡಂಗುಳಿಯ ಸಾವಿತ್ರಿಬಾಯಿ ಫುಲೆ ಸ್ಮಾರಕ ವಸತಿ ಶಾಲೆಯಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದ(ಇಂಗ್ಲಿಷ್ ಮಾಧ್ಯಮ, ರಾಜ್ಯ ಪಠ್ಯಕ್ರಮ) ಒಂದರಿಂದ ಎಂಟನೇ ತರಗತಿವರೆಗೆ ನಿಗದಿಪಡಿಸಿರುವ ವಿವಿಧ ಸೀಟ್‌ಗಳ ಪ್ರವೇಶಾತಿಗಾಗಿ ಕೊರಗ ಸಮುದಾಯದ ಮಕ್ಕಳಿಗೆ ಆದ್ಯತೆ ನೀಡಿ ಅರ್ಜಿ ಆಹ್ವಾನಿಸಲಾಗಿದೆ. ಆದಾಯ 2 ಲಕ್ಷ ರೂ. ಮೀರಬಾರದು. ಮಕ್ಕಳ ಪಾಲಕರು ಕೇಂದ್ರ ಮತ್ತು ರಾಜ್ಯ ಸಾರ್ವಜನಿಕ ವಲಯದ ಸಂಸ್ಥೆಗಳ ಉದ್ಯೋಗಿಗಳಲ್ಲ ಎಂದು ಖಚಿತಪಡಿಸುವ ಪ್ರಮಾಣಪತ್ರ ಅರ್ಜಿ ಸಲ್ಲಿಸಬೇಕು. ವಸತಿಗೃಹದಲ್ಲಿ ವಾಸ್ತವ್ಯಹೂಡಿ ಅಧ್ಯಯನ ಮಾಡಲು ಆಸಕ್ತಿ ಇರುವ ಪರಿಶಿಷ್ಟ ವರ್ಗ ವಿಭಾಗದ ವಿದ್ಯಾರ್ಥಿಗಳು-ಪಾಲಕರು ಮೇ 25ರವರೆಗೆ ಶಾಲೆಗೆ ಭೇಟಿ ನೀಡಿ ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಜನನ ಪ್ರಮಾಣಪತ್ರ ಹಾಗೂ ವೈದ್ಯಕೀಯ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ(04994 210922, 9497297325) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.