ಸ್ವರ್ಗದಲ್ಲಿರುವ ಶ್ರೀದೇವಿಯನ್ನು ಪೊಲೀಸರು ಬಂಧಿಸ್ತಾರಾ?; Ram Gopal Varma ಹೀಗೇಳಿದ್ದೇಕೆ?

ram gopal varma sridevi
Published on

ಹೈದರಾಬಾದ್​: ಹೈದರಾಬಾದ್​ ಸಂಧ್ಯಾ ಥಿಯೇಟರ್​ನಲ್ಲಿ ಡಿಸೆಂಬರ್​ 04ರಂದು ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಡೆದ ನಾಟಕೀಯ ಬೆಳವಣಿಗೆ ಈಗಲೂ ಚರ್ಚೆಯಲ್ಲಿದ್ದು, ನಟ ಅಲ್ಲು ಅರ್ಜುನ್​ ಬಂಧನವನ್ನು ಖಂಡಿಸಿ ಅನೇಕರು ಪೋಸ್ಟ್​ ಮಾಡಿ ಕಿಡಿಕಾರುತ್ತಿದ್ದಾರೆ. ಅಲ್ಲು ಅರ್ಜುನ್​ ಬಂಧನ ವಿಚಾರವಾಗಿ ನಿರ್ದೇಶಕ ರಾಮ್​​ಗೋಪಾಲ್​ ವರ್ಮಾ (Ram Gopal Varma) ಟ್ವೀಟ್​ ಮಾಡಿ ಕಿಡಿಕಾರಿದ್ದು ಶ್ರೀದೇವಿಯವರನ್ನು ಅರೆಸ್ಟ್​ ಮಾಡ್ತಾರಾ ಎಂದು ಪ್ರಶ್ನಿಸುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ವರ್ಮಾ (Ram Gopal Varma), ಅಲ್ಲು ಅರ್ಜುನ್​ ಅವರನ್ನು ಬಂಧಿಸಿದ್ದನ್ನು ಖಂಡಿಸಿ ಪ್ರತಿಯೊಬ್ಬ ನಟರು ಪ್ರತಿಭಟನೆ ನಡೆಸಬೇಕು.ಸಿನಿಮಾದವರು ಆಗಿರಬಹುದು ಅಥವಾ ರಾಜಕೀಯದವರು ಆಗಿರಬಹುದು. ತುಂಬ ಜನಪ್ರಿಯತೆ ಹೊಂದುವುದು ಅಪರಾಧವೇ? ನನ್ನ ಕ್ಷಣ ಕ್ಷಣಂ ಸಿನಿಮಾದ ಚಿತ್ರೀಕರಣದ ವೇಳೆ ಶ್ರೀದೇವಿಯನ್ನು ನೋಡಲು ಲಕ್ಷಾಂತರ ಜನರು ಬಂದಿದ್ದರು. 3 ಜನರು ಸಾವಿಗೀಡಾದರು. ಹಾಗಾದ್ರೆ ಈಗ ತೆಲಂಗಾಣ ಪೊಲೀಸರು ಸ್ವರ್ಗಕ್ಕೆ ಹೋಗಿ ಶ್ರೀದೇವಿಯನ್ನು ಬಂಧಿಸ್ತಾರಾ ಎಂದು ಪ್ರಶ್ನಿಸುವ ಮೂಲಕ ಪೊಲೀಸರ ನಡೆಯನ್ನು ಟೀಕಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ನಟ ಅಲ್ಲು ಅರ್ಜುನ್​ ವಿಷಾದ ವ್ಯಕ್ತಪಡಿಸಿ ಮೃತ ಮಹಿಳೆ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಇದಲ್ಲದೆ ಮಕ್ಕಳ ಶಿಕ್ಷಣ ಸೇರಿದಂತೆ ಆರ್ಥಿಕ ಸಹಾಯವನ್ನು ಮಾಡುವುದಾಗಿಯೂ ನಟ ವಿಡಿಯೋ ಸಂದೇಶದ ಮೂಲಕ ತಿಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net