ಕ್ಲಿನ್​ ಕಾರಾ ಮುಖ ತೋರಿಸಲು ನನ್ನದೊಂದು ಷರತ್ತು​​​; ಮೆಗಾ ಪವರ್​ ಸ್ಟಾರ್​​ ಹೇಳಿದ್ದೇನು ಗೊತ್ತಾ? | Ram Charan

Untitled design - 2025-01-07T153714.576
Published on

ಹೈದರಾಬಾದ್​​: ಟಾಲಿವುಡ್​​​ ಮೆಗಾ ಪವರ್​ ಸ್ಟಾರ್​ ರಾಮ್​ ಚರಣ್(Ram Charan)​ ಸದ್ಯ ಗೇಮ್​ ಚೇಂಜರ್​​ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.ಈ ಸಿನಿಮಾ ಜನವರಿ 10ರಂದು ಬಿಡುಗಡೆಯಾಗಲಿದೆ. ಪ್ರಚಾರದ ಭಾಗವಾಗಿ ಇತ್ತೀಚೆಗೆ ನಟ ರಾಮ್​ ಚರಣ್​​​​​, ಖಾಸಗಿ ವಾಹಿನಿಯಲ್ಲಿ ನಟ ಬಾಲಕೃಷ್ಣ ಅವರು ನಡೆಸಿಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ರಾಮಚರಣ್​ ಮಗಳು ಕ್ಲಿನ್​ ಕಾರಾ ಕುರಿತು ಮಾತನಾಡಿದ್ದಾರೆ. ಮಗಳ ಮುಖವನ್ನು ಜಗತ್ತಿಗೆ ಯಾವಾಗ ತೋರಿಸುತ್ತಾರೆ ಎಂಬುದನ್ನು ತಿಳಿಸಿದ್ದಾರೆ.

ಮಗಳು ಕ್ಲಿನ್ ಕಾರಾ ಹುಟ್ಟಿದ ವಿಡಿಯೋವನ್ನು ಕಾರ್ಯಕ್ರಮದಲ್ಲಿ ತೋರಿಸಲಾಗಿದೆ. ಅದನ್ನು ನೋಡಿ ಸಂತೋಷದಿಂದ ಭಾವುಕರಾನ ನಟ ರಾಮ್​ ಚರಣ್​​​ ತನ್ನ ಮಗಳು ತನ್ನ ಜೀವನದಲ್ಲಿ ಮಾತ್ರವಲ್ಲದೆ ತನ್ನ ತಂದೆ ಚಿರಂಜೀವಿಗೂ ಹೇಗೆ ದೊಡ್ಡ ಲಕ್​​​ ಎಂಬುದನ್ನು ವಿವರಿಸಿದ್ದಾರೆ. ತಂದೆಯಾದ ನಂತರ ತಮ್ಮ ಜೀವನದಲ್ಲಿ ಆದ ಬದಲಾವಣೆಗಳ ಬಗ್ಗೆ ರಾಮ್ ಚರಣ್ ಮಾತನಾಡಿದ್ದಾರೆ.

ಬಾಲಯ್ಯ ಜತೆ ತನ್ನ ಮಗಳಿಗೆ ಸಂಬಂಧಿಸಿದ ಕೆಲವು ಕಥೆಗಳನ್ನು ಹೇಳಿದರು. ಅವಳು ಈಗಾಗಲೇ ತನ್ನ ಹಾಡುಗಳಿಗೆ ಹೇಗೆ ನೃತ್ಯ ಮಾಡುತ್ತಾಳೆ ಎಂದು ಹೇಳಿದಳು. ಇದಾದ ನಂತರ ನಂದಮೂರಿ ಬಾಲಕೃಷ್ಣ ರಾಮ್​ಚರಣ್​ ಅವರಿಗೆ ಮಗಳ ಮುಖ ಯಾವಾಗ ತೋರಿಸುತ್ತೀರಿ ಎಂದು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ರಾಮ್ ಚರಣ್ ಮಗಳ ಮುಖವನ್ನು ಜಗತ್ತಿಗೆ ತೋರಿಸಲು ಒಂದು ಕಂಡೀಷನ್ ಇದೆ ಎಂದು ಹೇಳಿದ್ದಾರೆ. ನನ್ನನ್ನು ಅಪ್ಪ ಎಂದು ಕ್ಲಿನ್​​ ಕಾರಾ ಕರೆದಾಗ ಮುಖವನ್ನು ಜಗತ್ತಿಗೆ ತೋರಿಸುತ್ತೇನೆ ಎಂದು ರಾಮಚರಣ್​​​ ಹೇಳಿದ್ದಾರೆ. ಉಪಾಸನಾ ಅವರನ್ನು ರಾಮ್​ ಚರಣ್​ ವಿವಾಹವಾಗಿದ್ದಾರೆ. ಈ ದಂಪತಿಗೆ 2023ರಲ್ಲಿ ಮಗಳು ಜನಿಸಿದಳು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net