'ರಶ್ಮಿಕಾ ಜೊತೆ ನನ್ನ ಸಂಬಂಧ ಹಾಗೇ ಮುಂದುವರೆದಿದೆ': ಮದುವೆ ಬಗ್ಗೆ ಮಾಜಿ ಗೆಳೆಯ ಕಾಮೆಂಟ್!

rakshith-rashmika
Published on

ಬೆಂಗಳೂರು: ಕನ್ನಡದ ಅನೇಕ ಬೆಡಗಿಯರು ಟಾಲಿವುಡ್‌ನಲ್ಲಿ ನಾಯಕಿಯರಾಗಿ ಮಿಂಚುತ್ತಿದ್ದಾರೆ. ಅವರಲ್ಲಿ ಹಲವರು ಸ್ಟಾರ್ ನಾಯಕಿ ಪಟ್ಟವನ್ನು ಪಡೆದು ಬಳಿಕ ಬಾಲಿವುಡ್‌ಗೂ ಹಾರಿದವರಿದ್ದಾರೆ. ಅಂತಹವರಲ್ಲಿ ಸದ್ಯ ರಶ್ಮಿಕಾ ಮಂದಣ್ಣ ಮುಂಚೂಣಿಯಲ್ಲಿದ್ದಾರೆ. ಪ್ರಸ್ತುತ, ಈ ಕೊಡಗಿನ ಕುವರಿ ಭಾಷೆ ಲೆಕ್ಕಿಸದೆ ತನ್ನ ವೃತ್ತಿಜೀವನದಲ್ಲಿ ಮುನ್ನುಗ್ಗುತ್ತಿದ್ದಾಳೆ. ಆದರೆ ಇತ್ತೀಚೆಗಷ್ಟೇ ಆಕೆಯ ಮಾಜಿ ಗೆಳೆಯ ಸ್ಟಾರ್ ಹೀರೋ ರಕ್ಷಿತ್ ಆಕೆಯ ಬಗ್ಗೆ ವೈರಲ್ ಕಾಮೆಂಟ್ ಮಾಡಿದ್ದಾರೆ. ಈಗ ಎಲ್ಲರೂ ಅದರ ಬಗ್ಗೆ ಮಾತನಾಡುತ್ತಿದ್ದಾರೆ.

ನ್ಯಾಶನಲ್ ಕ್ರಶ್ ರಶ್ಮಿಕಾ ಕಿರಿಕ್​ ಚಿತ್ರದಲ್ಲಿ ನಟಿಸಿದ ನಂತರ ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿರುವ ನಟಿ. ಆಕೆ ಕಿರಿಕ್​ ಚಿತ್ರ ಮಾಡುವಾಗ ನಾಯಕ ರಕ್ಷಿತ್ ಶೆಟ್ಟಿಯನ್ನು ಪ್ರೀತಿಸಿ ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದಳು. ಆದರೆ ತೆಲುಗಿನಲ್ಲಿ ಅವಕಾಶಗಳು ಬರುತ್ತಿದ್ದಂತೆ ಮದುವೆ ಮುರಿದುಕೊಂಡಿದ್ದು ತಿಳಿದ ಸಂಗತಿಯೇ.

ತನ್ನ ವೃತ್ತಿಜೀವನದಲ್ಲಿ ಬೆಳೆಯುತ್ತಿರುವಾಗ ತನ್ನ ಕನಸನ್ನು ನನಸಾಗಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ರಶ್ಮಿಕಾ ಈ ಹಿಂದೆ ಬಹಿರಂಗಪಡಿಸಿದ್ದಳು. ಆ ನಂತರ ನಿರೀಕ್ಷೆಯಂತೆ ಸ್ಟಾರ್ ಹೀರೋಯಿನ್ ಆಗಿದ್ದು ಗೊತ್ತೇ ಇದೆ.

ಇದಾದ ಬಳಿಕ ಆಕೆ ರೌಡಿ ಹೀರೋ ವಿಜಯ್ ದೇವರಕೊಂಡ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಮಾತುಗಳು ಜೋರಾಗಿ ಕೇಳಿಬಂದವು. ಇವರಿಬ್ಬರು ಮದುವೆಯಾಗುತ್ತಾರೆ ಎಂದೂ ಎಲ್ಲರೂ ಮಾತನಾಡಿಕೊಂಡರು. ಮತ್ತೊಂದೆಡೆ, ರಕ್ಷಿತ್ ಶೆಟ್ಟಿ ಸಹ ಸ್ಟಾರ್​ ಹೀರೋ ಆಗಿ ಮಿಂಚುತ್ತಿದ್ದು, ಇತ್ತೀಚೆಗೆ ರಶ್ಮಿಕಾ ಜೊತೆಗಿನ ಮದುವೆ ಕ್ಯಾನ್ಸಲ್ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ನಮ್ಮ ಮದುವೆ ಮುರಿದು ಬಿದ್ದಿತು. ಆದರೆ ಏನಾಯಿತು? ನಾವು ಇನ್ನೂ ಸಂಪರ್ಕದಲ್ಲಿದ್ದೇವೆ. ಅವಳಿಗೆ ಜೀವನದಲ್ಲಿ ದೊಡ್ಡ ಕನಸಿದೆ. ಈಗ ಅವಳು ಬಯಸಿದ್ದು ಸಿಕ್ಕಿದೆ. ಇದರಿಂದ ನನಗೆ ಸಂತಸವಾಗಿದೆ ಎಂದಿದ್ದಾರೆ.

ಇದೀಗ ಈ ಕಾಮೆಂಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿವೆ. ಅವರು ಇನ್ನೂ ಸಂಪರ್ಕದಲ್ಲಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸುವ ಮೂಲಕ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net