ದೇಶದಲ್ಲಿ ಸಹೋದರ ಭಾವನೆ ನೆಲೆ: ಗಂಗಾಧರ ಪಿ.ಎನ್ ಆಶಯ

rakshabandana
ಶ್ರೀ ಮಾಧವ ಶಿಶು ಮಂದಿರದಲ್ಲಿ ರಕ್ಷೆ ಕಟ್ಟಿಸಿಕೊಳ್ಳುತ್ತಿರುವ ಮಕ್ಕಳು.
Published on

ಉಪ್ಪಿನಂಗಡಿ: ಪೌರಾಣಿಕ ಹಿನ್ನೆಲೆಯುಳ್ಳ ರಕ್ಷೆ ಧಾರಣೆಯಲ್ಲಿ ಸಹೋದರ ಬಾಂಧವ್ಯ ಬೆಸೆಯುವ ಸಂದೇಶ ಅಡಕವಾಗಿದೆ. ದೇಶದ ಜನತೆ ಪರಸ್ಪರ ಸಹೋದರ ನೆಲೆಗಟ್ಟಿನಲ್ಲಿ ಸಂಘಟನೆಗೊಳ್ಳಲು ರಕ್ಷಾಬಂಧನವು ಸಹಕಾರಿಯಾಗಲಿ ಎಂದು ಸಾಮಾಜಿಕ ಚಿಂತಕ, ಬಜತ್ತೂರು ಗ್ರಾಪಂ ಅಧ್ಯಕ್ಷ ಗಂಗಾಧರ ಪಿ.ಎನ್ ನೆಕ್ಕರಾಜೆ ಕರೆ ನೀಡಿದರು.

ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ನಡೆದ ರಕ್ಷಾಬಂಧನ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಶಿಶು ಮಂದಿರ ಆಡಳಿತ ಮಂಡಳಿಯ ಸದಸ್ಯ ಕಂಗ್ವೆ ವಿಶ್ವನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪೂರ್ಣಚಂದ್ರ ಅಂಬೆಲ ಮಾತನಾಡಿದರು. ಶಿಶು ಮಂದಿರದ ಮಾತಾಜಿಗಳಾದ ಚೈತ್ರಾ, ಕಾಂತಿಮಣಿ, ಚಂದ್ರಾವತಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net