ಶ್ರೀ ರಾಮ ಗೆಳೆಯರ ಬಳಗದಿಂದ ಶ್ರಮದಾನ

CLEAN
ಸಬಳೂರು ಶಾಲೆಯಲ್ಲಿ ಶ್ರೀ ರಾಮ ಗೆಳೆಯರ ಬಳಗದಿಂದ ಶ್ರಮದಾನ ನಡೆಯಿತು. ಪ್ರಶಾಂತ್ ಸಬಳೂರು, ಯತೀಶ್ ಸೀಗೆತ್ತಡಿ ಮೊದಲಾದವರಿದ್ದರು.
Published on

ಕಡಬ: ಕೊಯಿಲ ಗ್ರಾಮದ ಸಬಳೂರು ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಶ್ರೀರಾಮ ಗೆಳೆಯರ ಬಳಗದ ಸದಸ್ಯರಿಂದ ಭಾನುವಾರ ಶ್ರಮದಾನ ನಡೆಯಿತು.

ಶ್ರೀ ರಾಮ ಗೆಳೆಯ ಬಳಗದ ಅಧ್ಯಕ್ಷ ಪ್ರಶಾಂತ್ ಸಬಳೂರು ನೇತೃತ್ವದಲ್ಲಿ ಶಾಲಾ ಮೈದಾನ ಸ್ವಚ್ಛತೆ, ಶಾಲಾ ಸಂಪರ್ಕ ರಸ್ತೆಯ ಎರಡು ಬದಿಯಲ್ಲಿದ್ದ ಪೊದೆಗಳ ತೆರವು ಕಾರ್ಯ ನಡೆಯಿತು. ಕೊಯಿಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯತೀಶ್ ಸೀಗೆತ್ತಡಿ, ಸದಸ್ಯ ಚಿದಾನಂದ ಪಾನ್ಯಾಲು, ಮಾಜಿ ಸದಸ್ಯ ಸುಪ್ರಿತ್ ರೈ ಬುಡಲೂರು, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶೇಖರ ಗೌಡ ಕೊಲ್ಯ, ಮುಖ್ಯ ಶಿಕ್ಷಕಿ ವಾರಿಜ ಬಿ, ಉದ್ಯಮಿ ಬಾಲಕೃಷ್ಣ ಗೌಡ ಸೇರಿದಂತೆ ಶ್ರೀರಾಮ ಗೆಳೆಯರ ಬಳಗದ ಪದಾಧಿಕಾರಿಗಳು ಶ್ರಮದಾನದಲ್ಲಿ ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net