ರಾಷ್ಟ್ರಭಕ್ತಿಯ ಸಂಕೇತ ರಕ್ಷಾ ಬಂಧನ

gan (3)
Published on

ಗಂಗೊಳ್ಳಿ: ರಕ್ಷೆ ಎನ್ನುವುದು ಕೇವಲ ದಾರದ ಗುಚ್ಛವಲ್ಲ. ಸ್ತ್ರೀ-ಪುರುಷ ಎಂಬ ಬೇಧವಿಲ್ಲದೆ ಪರಸ್ಪರ ರಕ್ಷಣೆಯ ಧ್ಯೇಯದೊಂದಿಗೆ ಸಹೋದರತ್ವದ, ಸ್ನೇಹದ, ಸ್ವಾಭಿಮಾನದ, ಸಾಮಾಜಿಕ ಬಾಂಧವ್ಯದ ರಾಷ್ಟ್ರಭಕ್ತಿಯ ಸಂಕೇತ. ರಕ್ಷಾ ಬಂಧನ ಕೇವಲ ಸಹೋದರ ಸಹೋದರಿಯರ ನಡುವೆ ಮಾತ್ರ ನಡೆಯುವ ಹಬ್ಬ ಅಲ್ಲ. ಜಾತಿ, ಮತ, ಧರ್ಮಗಳ ನಡುವೆ ಸ್ನೇಹಪೂರ್ವಕ ಸಂಕೇತವಾಗಿಯೂ ರಕ್ಷಾ ಬಂಧನ ಮಹತ್ವವನ್ನು ಪಡೆದುಕೊಂಡಿದೆ ಎಂದು ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ಸಹಶಿಕ್ಷಕಿ ದಿವ್ಯಶ್ರೀ ಆಚಾರ್ಯ ಹೇಳಿದರು.

ಗಂಗೊಳ್ಳಿ ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಆಶ್ರಯದಲ್ಲಿ ಜೆಸಿಐ ಗಂಗೊಳ್ಳಿ ಹಾಗೂ ಕೊಂಚಾಡಿ ರಾಧಾ ಶೆಣೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದೊಂದಿಗೆ ಶಾಲೆಯ ಸಭಾಂಗಣದಲ್ಲಿ ಶನಿವಾರ ಜರುಗಿದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊಂಚಾಡಿ ರಾಧಾ ಶೆಣೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಯಶೋದಾ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಜೆಸಿಐ ಕಾರ್ಯದರ್ಶಿ ನಾಗರಾಜ ಖಾರ್ವಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಅಶೋಕ ಪೂಜಾರಿ, ಶಿಶು ಮಂದಿರದ ಸದಸ್ಯರಾದ ಭಾಸ್ಕರ ಎಚ್.ಜಿ., ವಸಂತಿ ಎನ್.ಖಾರ್ವಿ, ಪ್ರೇಮಾ, ಸಹಾಯಕಿ ರತ್ನಾ ಉಪಸ್ಥಿತರಿದ್ದರು.

ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಅಧ್ಯಕ್ಷ ಬಿ.ರಾಘವೇಂದ್ರ ಪೈ ಸ್ವಾಗತಿಸಿದರು. ಸಂಚಾಲಕ ಡಾ.ಕಾಶೀನಾಥ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಅಧ್ಯಕ್ಷೆ ಸವಿತಾ ಉಮಾನಾಥ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಅಶ್ವಿತಾ ಜಿ.ಪೈ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net