ಸಿಬ್ಬಂದಿ ಸಹಾಯದಿಂದ ಉತ್ತಮ ಕಾರ್ಯ

byn
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ನಿಷ್ಠಾವಂತ ಸದಸ್ಯರ ಸಹಕಾರ, ನಿಸ್ವಾರ್ಥ ಮತ್ತು ಆದರ್ಶವಾದ ನಿರ್ದೇಶಕ ಮಂಡಳಿ ಹಾಗೂ ನಗು ಮೊಗದ ಸೇವೆ ನೀಡುವ ಸಿಬ್ಬಂದಿ ಸಹಾಯದಿಂದ ನಮ್ಮ ಸಹಕಾರಿ ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದ್ದು, ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿದೆ ಎಂದು ಉಪ್ಪುಂದ ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋಆಪರೇಟೀವ್ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಹೇಳಿದರು.

ಉಪ್ಪುಂದದ ದೇವಕಿ ಸಭಾಭವನದಲ್ಲಿ ಶನಿವಾರ ನಡೆದ ಸಂಸ್ಥೆಯ ಸಾವಾನ್ಯ ಸಭೆಯಲ್ಲಿ ಮಾತನಾಡಿದರು.

ಸಂವು ವರದಿ ವರ್ಷದಲ್ಲಿ 83.19 ಕೋಟಿ ರೂ. ವ್ಯವಹಾರ ನಡೆಸಿ 26.74 ಲಕ್ಷ ರೂ. ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.10.5 ಡಿವಿಡೆಂಡ್ ನೀಡಲಾಗುವುದು ಎಂದು ೋಷಿಸಿದರು. ಮುಂದಿನ ದಿನಗಳಲ್ಲಿ ಗೋಳಿಹೊಳೆ, ನಾವುಂದ, ಅಂಪಾರು ಹಾಗೂ ಹಳ್ಳಿಹೊಳೆಯಲ್ಲಿ ಸಂದ ಶಾಖೆಗಳನ್ನು ವಿಸ್ತರಿಸುವ ಉದ್ದೇಶವಿದೆ ಎಂದರು.

ಎಸ್‌ಎಸ್‌ಎಲ್‌ಸಿ. ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸೊಸೈಟಿ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ಸಂ ನಿರ್ದೇಶಕ ರಾವೇಂದ್ರ ಪೂಜಾರಿ, ದೇವನ್ ಕೆ. ಪೂಜಾರಿ, ವಾಲತಿ ಜಿ.ಪೂಜಾರಿ, ಪಾರ್ವತಿ ಪೂಜಾರಿ, ವಾಚಯ್ಯ ಪೂಜಾರಿ, ಗಿರೀಶ್ ಹೊಳ್ಳ, ರಾಮ ಗಾಣಿಗ, ಗೋವಿಂದ ಎನ್.ಪೂಜಾರಿ, ಲಾರೆನ್ಸ್ ರ್ನಾಂಡಿಸ್, ಮೂಕಾಂಬು ಪೂಜಾರಿ, ಮಂಜುನಾಥ ರಾಮ ನಾಯ್ಕ, ಪದ್ಮಾ ಎಚ್. ಉಪಸ್ಥಿತರಿದ್ದರು.

ಉಪಾಧ್ಯಕ್ಷ ಜಯರಾಮ ಶೆಟ್ಟಿ ಬಿಜೂರು ಸ್ವಾಗತಿಸಿ, ತ್ರಾಸಿ ಶಾಖಾ ವ್ಯವಸ್ಥಾಪಕ ಪ್ರವೀಣ್ ಆಚಾರ್ ವಂದಿಸಿದರು. ಶಾಖೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಧಾಕರ ಪೂಜಾರಿ ಲೆಕ್ಕ ಪತ್ರ ಮಂಡಿಸಿದರು. ಬೈಂದೂರು ಶಾಖಾ ವ್ಯವಸ್ಥಾಪಕ ನಾಗರಾಜ ಪಿ. ಯಡ್ತರೆ ನಿರೂಪಿಸಿದರು. ಸಿದ್ದಾಪುರ ಶಾಖಾ ವ್ಯವಸ್ಥಾಪಕ ಅಂಬರೀಶ್ ಪೂಜಾರಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net