

Mohan Yadav: ರಕ್ಷಾ ಬಂಧನವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದ ಮಧ್ಯಪ್ರದೇಶ ಸರ್ಕಾರ, ದಿವ್ಯಾಂಗರಿಗೆ ಸಹಾಯಕ ಸಾಧನಗಳನ್ನು ವಿತರಿಸಲು ಇಂದೋರ್ ವಿಭಾಗದ ಅಗರ್-ಮಾಲ್ವಾದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಮುಂಬರುವ ದಿನಗಳು ಮಹಿಳೆಯರ ಪಾಲ್ಗೊಳ್ಳುವಿಕೆಗೆ ಸಾರ್ವಜನಿಕ ವ್ಯವಸ್ಥೆ ಮುಕ್ತವಾಗಿರಲಿವೆ ಎಂದರು. ದಿವ್ಯಾಂಗರಿಗೆ ರಕ್ಷಾ ಬಂಧನದ ಶುಭಾಶಯಗಳನ್ನು ಕೋರಿದ ಯಾದವ್, ಉತ್ತಮ ಜೀವನ ನಡೆಸಲು ಸಹಾಯ ಮಾಡುವ 52 ಲಕ್ಷಕ್ಕೂ ಹೆಚ್ಚು ಮೌಲ್ಯದ ತ್ರಿಚಕ್ರ ವಾಹನಗಳನ್ನು ಪಡೆದ ಫಲಾನುಭವಿಗಳನ್ನು ಅಭಿನಂದಿಸಿದರು ಎಂದು ವರದಿಯಾಗಿದೆ.
ಇದನ್ನೂ ಓದಿ:ಮಕ್ಕಳ ಹೃದಯದಲ್ಲಿ ಅರಳಿದ ಬಾಂಧವ್ಯದ ಹೂವು
ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಲಾಡ್ಲಿ ಬೆಹ್ನಾ ಯೋಜನೆಯ ಬಗ್ಗೆ ದೊಡ್ಡ ಘೋಷಣೆ ಹೊರಡಿಸಿದ್ದು, ಪರೇಡ್ ಮೈದಾನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಲಾಡ್ಲಿ ಬೆಹ್ನಾ ಯೋಜನೆಯಡಿಯಲ್ಲಿ ರಾಜ್ಯದ ಮಹಿಳೆಯರಿಗೆ ಪ್ರಸ್ತುತ ನೀಡುತ್ತಿದ್ದ 1500 ರೂ.ಗಳನ್ನು 3000 ರೂ.ಗಳಿಗೆ ಹೆಚ್ಚಿಸಲಾಗುವುದು ಎಂದರು. ಈ ಹಿಂದೆ ಯೋಜನೆ ಘೋಷಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಈ ಯೋಜನೆಯನ್ನು ವಿರೋಧಿಸಿತ್ತು ಮತ್ತು ಚುನಾವಣಾ ಯೋಜನೆ ಎಂದು ಕರೆದಿತ್ತು, ಆದರೆ ನಮ್ಮ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಿದೆ ಮತ್ತು ಮೊತ್ತವನ್ನು ದ್ವಿಗುಣಗೊಳಿಸಲು ಸಿದ್ಧತೆ ನಡೆಸುತ್ತಿದೆ ಎಂದರು.(ಏಜೆನ್ಸೀಸ್)