ಮಕ್ಕಳ ಹೃದಯದಲ್ಲಿ ಅರಳಿದ ಬಾಂಧವ್ಯದ ಹೂವು

9ss2
ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಪರಸ್ಪರ ರಾಕಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬ ಆಚರಿಸಲಾಯಿತು.
Published on

ಶನಿವಾರಸಂತೆ:ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟಾಗಿ ರಕ್ಷಿಸೋಣ ಎಂಬ ಶೀರ್ಷಿಕೆಯಡಿ ಮಕ್ಕಳು ಶಾಸ್ತ್ರೋಕ್ತವಾಗಿ ರಕ್ಷೆ ಕಟ್ಟುವ ಬಾಂಧವ್ಯದ ಸಂಕೇತ ರಕ್ಷಾ ಬಂಧನವನ್ನು ವಿಶಿಷ್ಟವಾಗಿ ಆಚರಿಸಿದರು.

ಶಾಲಾ ಮುಖ್ಯಶಿಕ್ಷಕ ಸಿ.ಎಸ್.ಸತೀಶ್ ರಕ್ಷಾ ಬಂಧನದ ಮಹತ್ವ ಕುರಿತು ಮಾತನಾಡಿ, ಭಾರತವು ಸನಾತನ ಸಂಸ್ಕೃತಿಯ ಪ್ರತೀಕ. ಆದರೆ ಇಂದು ಈ ರೀತಿಯ ಸಂಸ್ಕೃತಿಗಳು ನಶಿಸುತ್ತಿವೆ. ಆಡಂಬರದ ಹಲವು ಪಾಶ್ಚಾತ್ಯ ಸಂಸ್ಕೃತಿಯ ಗುಂಗಿನಲ್ಲಿ ನಮ್ಮ ಮೂಲ ಸಂಸ್ಕೃತಿ ಮೂಲೆಗುಂಪಾಗಿದೆ. ಈ ಕಾರಣದಿಂದ ಸಮಾಜದಲ್ಲಿ ನೈತಿಕ ಮೌಲ್ಯ ಕಡಿಮೆಯಾಗುತ್ತಿದ್ದು, ಈ ದಿಸೆಯಲ್ಲಿ ಮಕ್ಕಳಲ್ಲಿ ಬಾಂಧವ್ಯದ ಬೆಸುಗೆ ಬೆಳೆಯಲು ರಕ್ಷಾ ಬಂಧನ ಹಬ್ಬ ಸಹಾಯಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು

ಶಾಲೆಯ ಸಹಶಿಕ್ಷಕ ಜಾನ್ ಪಾವ್ಲ್ ಡಿಸೋಜ ಮಕ್ಕಳಿಗೆ ರಕ್ಷಾ ಬಂಧನದ ಆಚರಣೆ ಕುರಿತು ತಿಳಿಸಿಕೊಟ್ಟರು. ಸಹಶಿಕ್ಷಕಿ ಶೀಲಾ ವಿದ್ಯಾರ್ಥಿನಿಯರಿಂದ ವಿದ್ಯಾರ್ಥಿಗಳಿಗೆ ರಕ್ಷೆ ಕಟ್ಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net